ಮಡಿಕೇರಿ, ಆ. 10: ವೀರಾಜಪೇಟೆ ಸಮೀಪದ ಚಿಟ್ಟಡೆ ಎಂಬಲ್ಲಿ ಮೂರು ದಿನಗಳಿಂದ ದ್ವೀಪದಂತಾಗಿದ್ದು ಜನರು ಸಂಪರ್ಕಕ್ಕೆ ಸಿಗದೆ ಪರದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ವಿದ್ಯುತ್ ಸಂಪರ್ಕ ಕೂಡ ಇಲ್ಲ. ರಸ್ತೆ ಸಂಪೂರ್ಣ ನೀರಿನಿಂದ ಆವರಿಸಿದೆ. ಆಹಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ; ಮಕ್ಕಳಿಗೆ ಮತ್ತು ವೃದ್ಧರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ, ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು ಎಂದು ಚಿಟ್ಟಡೆ ಗ್ರಾಮದ ಮಸೀದಿ ಪಕ್ಕದ ಮೂವತ್ತು ಮನೆಗಳ ನಿವಾಸಿಗಳು ಕೋರಿಕೊಂಡಿದ್ದಾರೆ