ಮಡಿಕೇರಿ, ಆ. 9 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ
2019-20ನೇ ಸಾಲಿನ ನಿರುಪಯುಕ್ತ 10 ಸಂಖ್ಯೆ ವಾಹನಗಳನ್ನು ತಾ. 9 ರಂದು (ಇಂದು) ಬಹಿರಂಗ ಹರಾಜು ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು, ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಈ ಬಹಿರಂಗ ಹರಾಜು ಪ್ರಕ್ರಿಯೆ ಮುಂದೂಡಲಾಗಿದ್ದು, ಮುಂದಿನ ದಿನಾಂಕ ನಿಗಧಿಯಾದ ನಂತರ ತಿಳಿಸಲಾಗುವದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಹೇಳಿದ್ದಾರೆ.