ಗೋಣಿಕೊಪ್ಪಲು, ಆ. 9: ಗೋಣಿಕೊಪ್ಪಲುವಿನ ಎರಡು ಪರಿಹಾರ ಕೇಂದ್ರದಲ್ಲಿ 75 ಕುಟುಂಬಗಳಿಗೆ ಆಶ್ರಯ ನೀಡಲಾಗಿದ್ದು 170 ಮಂದಿ ಆಶ್ರಯಪಡೆದಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಅರ್ಹ ಪಲಾನುಭವಿಗಳಿಗೆ ಕಂಬಳಿ, ಟಾರ್ಪಲ್ ವಿತರಿಸಲಾಗಿದೆ.

ನೋಡಲ್ ಅಧಿಕಾರಿಗಳಾಗಿ ಸಿಡಿಪಿಒ ಸೀತಾ ಲಕ್ಷ್ಮಿ ನೇಮಕಗೊಂಡಿದ್ದು ನೊಂದ ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ರೆವಿನ್ಯೂ ಅಧಿಕಾರಿ ಯಶ್‍ವಂತ್, ಸಿಬ್ಬಂದಿ ಸುನೀಲ್, ರಾಜೇಶ್, ಉಮೇಶ್, ಪಿಡಿಒ ಶ್ರೀನಿವಾಸ್, ಸಿಬ್ಬಂದಿಗಳಾದ ಸುಬ್ರಮಣ್ಯ, ಸತೀಶ್ ನವೀನ್ ಮುಂತಾದವರು ಜವಾಬ್ದಾರಿ ನಿಬಾಯಿಸುತ್ತಿದ್ದಾರೆ.

ಪಟ್ಟಣದ ಮಧ್ಯ ಪರಿಹಾರ ಕೇಂದ್ರ ಸ್ಥಾಪಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತರಲ್ಲದೆ ದಾರಿಹೋಕರು ಸೇರಿದಂತೆ ಇನ್ನಿತರ ಸವಲತ್ತುಗಳನ್ನು ಪಡೆಯಲು ಮುಗಿಬೀಳುತ್ತಿದ್ದಾರೆ.ಇವರನ್ನು ಹತೋಟಿಗೆ ತರಲು ಅಧಿಕಾರಿಗಳು ಹರಸಹಾಸ ಪಡುತ್ತಿದ್ದಾರೆ.ಪರಿಹಾರ ಕೇಂದ್ರಕ್ಕೆ ಬರುವ ಸವಲತ್ತುಗಳು ಕ್ಷಣಾರ್ಧದಲ್ಲಿ ಖಾಲಿಯಾಗುತ್ತಿವೆ.

- ಹೆಚ್.ಕೆ.ಜಗದೀಶ್