ಗುಡ್ಡೆಹೊಸೂರು: ಇಲ್ಲಿನ ಸಿದ್ದಾಪುರ ರಸ್ತೆಯ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸ್ಥಳದಲ್ಲಿ ಕಾವೇರಿ ನದಿ ನೀರು ನುಗ್ಗಿ ಕುಶಾಲನಗರ ಸಿದ್ದಾಪುರ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೆ ನದಿ ನೀರು ನುಗ್ಗಿ ತೆಪ್ಪದ ಕಂಡಿ ಬಳಿಯ ಎಲ್ಲಾ ಮನೆಗಳು ಜಲಾವೃತ ಗೊಂಡಿವೆ ಅಲ್ಲಿನ ನಿವಾಸಿ ಸಣ್ಣಯ್ಯ ಮತ್ತು ಕುಮಾರ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದೆ ಅಲ್ಲಿನ ನಿವಾಸಿಗಳನ್ನು ಮಾದಪಟ್ಟಣದ ಸಮುದಾಯ ಭವನಕ್ಕೆ ಗುಡ್ಡೆಹೊಸುರು ಪಿ.ಡಿ.ಓ ಶ್ಯಾಂ ಅವರು ಸ್ಥಳಾಂತರಿಸಿದರು. ಜನರನ್ನು ರ್ಯಾಫ್ಟ್ ಮೂಲಕ ರಸ್ತೆ ದಾಟಿಸುವ ಕಾರ್ಯವನ್ನು ಸ್ಥಳೀಯ ಮಾಲೀಕರು ನಡೆಸಿದರು. -ಗಣೇಶ್