ಗುಡ್ಡೆಹೊಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾ.ಗಿರಗೂರು ಗ್ರಾಮದಲ್ಲಿ ಅರಣ್ಯ ಇಲಾಖಾ ಸಸ್ಯಕ್ಷೇತ್ರಕ್ಕೆ ಕಾವೇರಿ ನದಿ ನೀರು ನುಗ್ಗಿ ತೇಗ,ಹೆಬ್ಬೇವು, ಸಿಲ್ವರ್, ಶ್ರೀಗಂಧದ ಸುಮಾರು 80 ಸಾವಿರ ಗಿಡಗಳು ನೀರು ಪಾಲಾಗಿವೆ, ನರ್ಸರಿಯಲ್ಲಿ 5 ಅಡಿಗಳಷ್ಟು ನೀರು ತುಂಬಿದ್ದು ಇನ್ನೂ 2 ದಿನಗಳ ಕಾಲ ನೀರು ನಿಂತರೆ ಗಿಡಗಳು ಸಂಪೂರ್ಣ ನಾಶವಾಗಲಿದೆ. ಸ್ಥಳದಲ್ಲಿ ವಲಯ ಅರಣ್ಯಾಧಿಕಾರಿ ಶೈಲಜ ಅಧಿಕಾರಿಗಳಾದ ರಾಮಣ್ಣ,ಕುಡೆಕ್ಕಲ್ ಮುತ್ತಪ್ಪ ಮುಂತಾದವರು ಹಾಜರಿದ್ದರು.