ಕೂಡಿಗೆ, ಆ. 9: ಕಾವೇರಿ ಮತ್ತು ಹಾರಂಗಿ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇಂದು ಕಾವೇರಿ ಮತ್ತು ಹಾರಂಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ ಸಂಗಮ ಸ್ಥಳದಿಂದ ಕೂಡ್ಲೂರು - ಶಿರಂಗಾಲದವರೆಗೆ 150ಕ್ಕೂ ಹೆಚ್ಚು ಕೃಷಿ ಮಾಡಿದ ಗದ್ದೆಗಳು ಜಲಾವೃತಗೂಂಡಿವೆ.
ಕೂಡ್ಲೂರು, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ಶಿರಂಗಾಲ, ತೂರೆನೊರು ಕಾವೇರಿ ನದಿ ತಟ್ಟದ ಪ್ರದೇಶಗಳಿಗೆ ನೀರು ನುಗ್ಗಿದೆ. ಈ ವ್ಯಾಪ್ತಿಯ ರೈತರು ಜೋಳ, ಶುಠಿ ಕೆಸ, ಅಡಕೆಗಿಡಗಳು, ಕೆಲವು ಭತ್ತದ ನಾಟಿ ಗದ್ದೆಗಳು ನೀರಿನಿಂದ ಮುಳುಗಿವೆ. ಶುಂಠಿ ಕರಗುತ್ತಿದೆ, ಈ ಭಾಗ ರೈತರು ಭಾರಿ ನಷ್ಟಕ್ಕೊಳಗಾಗಿದ್ದಾರೆ.
- ನಾಗರಾಜಶೆಟ್ಟಿ