ಗೋಣಿಕೊಪ್ಪ ವರದಿ, ಆ. 08 ; ಕೀರೆಹೊಳೆ ದಂಡೆಯ ನೇತಾಜಿ ಬಡಾವಣೆ, ಪಟೇಲ್ ನಗರ, ಎಂ.ಎಂ ಲೇಔಟ್, ಅಚ್ಚಪ್ಪ ಬಡಾವಣೆ, ಕಾವೇರಿ ಹಿಲ್ಸ್, ವೆಂಕಟಪ್ಪ ಬಡಾವಣೆಗಳಲ್ಲಿನ ಮನೆಗಳು ಮುಳುಗಡೆಯಾಗಿವೆ. ನೇತಾಜಿ ಬಡಾವಣೆಯಲ್ಲಿ 15 ಮನೆಗಳು ಜಲಾವೃತಗೊಂಡಿದೆ. ಸುಮಾರು 100 ಮೀಟರ್‍ಗಳಿಗೂ ಅಧಿಕ ಪ್ರವಾಹ ವಿಸ್ತರಣೆಯಾಗಿದೆ.2 ನೇ ವಿಭಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ ನಿರಾಶ್ರಿತರ 60 ಕ್ಕೂ ಮನೆಗಳು ಜಲಾವೃತವಾಗಿದೆ. ಇಲ್ಲಿ ಪುಟ್ಟಮ್ಮ, ಜಯಮ್ಮ, ಪಾಂಡಿಕುಮಾರ್, ಲೋಕಿ ಎಂಬುವವರಿಗೆ ಸೇರಿದ 4 ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ. 15 ಕೋಳಿಗಳು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, 1 ಕೋಳಿಯನ್ನು ಸ್ಥಳೀಯರು ರಕ್ಷಿಸಲಾಗಿದೆ.
ಪಟೇಲ್ ನಗರದಲ್ಲಿ 5 ಮನೆ, ಎಂ.ಎಂ ಬಡಾವಣೆಯಲ್ಲಿ 20 ಕ್ಕೂ ಹೆಚ್ಚು ಮನೆಗಳು, ಅಚ್ಚಪ್ಪ ಬಡಾವಣೆಯಲ್ಲಿ 10 ಮನೆಗಳು ಜಲಾವೃತಗೊಂಡಿದೆ.
ನಿವಾಸಿಗಳು ಮನೆ ತೊರೆದು ಸುತ್ತಮುತ್ತಲಿನ ಮನೆಗಳಿಗೆ ಸೇರಿಕೊಳ್ಳುತ್ತಿದ್ದಾರೆ. ಗ್ರಾಮದ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ಸಮಯ ಮೀರುತ್ತಿದ್ದಂತೆ ನೀರಿನ ಪ್ರವಾಹ ಹೆಚ್ಚಾಗುತ್ತಿದೆ. ಕ್ಷಣಕ್ಷಣಕ್ಕೂ ಆತಂಕ ಎದುರಿಸುವಂತಾಗಿದೆ. ಕಾವೇರಿ ಹಿಲ್ಸ್‍ನಲ್ಲಿ
(ಮೊದಲ ಪುಟದಿಂದ) ಅಮ್ಮಕೊಡವ ಸಮಾಜ ಕಟ್ಟಡ ಸೇರಿದಂತೆ 10 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.
ಟಾಟಾ ಕಾಫಿ ಸಂಸ್ಥೆಯ ಗೋದಾಮು ಮುಳುಗಿ ಸುಮಾರು 700 ಕ್ಕೂ ಹೆಚ್ಚು ಚೀಲ ನೀರಿನಲ್ಲಿ ಮುಳುಗಿದೆ. ಮುಖ್ಯರಸ್ತೆಯ ಕೀರೆಹೊಳೆ ಸೇತುವೆ ಹೊರತು ಪಡಿಸಿ ಸುತ್ತಲೂ ಜಲಾವೃತಗೊಂಡಿರುವದರಿಂದ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದೆ. ಪಾಲಿಬೆಟ್ಟ ರಸ್ತೆ, ಪೊನ್ನಂಪೇಟೆ ರಸ್ತೆ, ಬೈಪಾಸ್ ನೀರಿನಲ್ಲಿ ಮುಳುಗಿ ವಾಹನ ಸಂಚಾರ ಇಲ್ಲದಾಗಿದೆ. ನಡೆದಾಡಿಕೊಂಡು ಜನರು ಮನೆ ಸೇರಿಕೊಳ್ಳುತ್ತಿದ್ದಾರೆ.
ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಸುಮಾರು 160 ನಿರಾಶ್ರಿತರು. ಬುಧವಾರ 9 ನಿರಾಶ್ರಿತರು ಇದ್ದರು. ಬೆಳಗ್ಗಿನ ಉಪಹಾರ ನೀಡಲಾಗಿದೆ.
ನಿಟ್ಟೂರು ಮೂಲಕ ಹರಿಯುವ ಲಕ್ಷ್ಮಣತೀರ್ಥ ನದಿಯ ನೂತನ ಸೇತುವೆ ಕೂಡ ಮುಳುಗಡೆಯಾಗಿದೆ. ಪರಿಣಾಮ ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿಗೆ ಬಾಳೆಲೆ ಮೂಲಕ ತೆರಳಲು ತೊಂದರೆಯಾಗಿದೆ.
ಕುರ್ಚಿ ಗ್ರಾಮದ ಅಜ್ಜಮಾಡ ಕುಟ್ಟುಮಣಿ ಎಂಬುವವರ ಮನೆಗೆ ಬರೆ ಕುಸಿದು ಗೋಡೆಗೆ ಹಾನಿಯಾಗಿದೆ. ನಿವಾಸಿಗಳಿಗೆ ಯಾವದೇ ತೊಂದರೆಯಾಗಿಲ್ಲ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಕ್ಷ್ಮಣತೀರ್ಥ ಅಪಾಯದ ಮಟ್ಟ ಮೀರಿ ಹರಿಯುತ್ತಿರುವದರಿಂದ ಒಂದಷ್ಟು ಮನೆಗಳಿಗೆ ನೀರು ನುಗ್ಗಿದೆ. ನಿರಾಶ್ರಿತರು ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೂರು ಗ್ರಾಮದ ಬೆಳೆಗಾರ ಪುತ್ತಮನೆ ಸ್ಮರಣ್ ಅವರಿಗೆ ಸೇರಿದ ಕೆರೆ ಹೊಡೆದು ನಷ್ಟ ಉಂಟಾಗಿದೆ. ಇದರಿಂದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. -ಸುದ್ದಿಪುತ್ರ / ಜಗದೀಶ್