ಮಡಿಕೇರಿ, ಆ. 8: ಇಂದು ಕಾನೂರು ಸನಿಹ ನಿಡುಗುಂಬೆಯನ್ನು ಲಕ್ಷ್ಮಣ ತೀರ್ಥ ನದಿ ಸುತ್ತಲೂ ಆವರಿಸಿದಾಗ ಸುಮಾರು 65 ಮಂದಿ ತಮ್ಮ ಕುಟುಂಬದ ನಿವಾಸ ದೊಳಗೆ ಸಿಲುಕಿ ಪ್ರಾಣಾಪಾಯದ ಸ್ಥಿತಿಯಲ್ಲಿ ನಲುಗಿದರು. ಈ ಎಲ್ಲರನ್ನೂ ಸಂಜೆ ತಡ ವೇಳೆಯವರೆಗೂ ಕಾರ್ಯಾ ಚರಣೆ ಮೂಲಕ ರಕ್ಷಿಸಲಾಯಿತು. ಅಪಾಯದಲ್ಲಿ ಸಿಲುಕಿದವರ ಪೈಕಿ ಸುರೇಶ್, ರೇಖಾ ಮತ್ತು ಇಂಪಾನ್ ಎಂಬವರುಗಳು “ಶಕ್ತಿ”ಯನ್ನು ಸಂಪರ್ಕಿಸಿದ್ದು ಜಿಲ್ಲಾಡಳಿತದ ಗಮನಕ್ಕೆ ತರಲು ಕೋರಿದರು. ಈ ಕುರಿತು “ಶಕ್ತಿ” ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಕ್ಷಣ ಸ್ಪÀಂದಿಸಿದ್ದು ಎನ್‍ಡಿಆರ್‍ಎಫ್‍ಗೆ ಸೂಚನೆಯಿತ್ತರು. ಈ ನಡುವೆ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ ಪ್ರವಾಸದಲ್ಲಿದ್ದು ಸಂಪರ್ಕಕ್ಕೆ ತಕ್ಷಣ ಲಭ್ಯವಾಗಲಿಲ್ಲ. ಬಳಿಕ ಮಧು ದೇವಯ್ಯ ಅವರನ್ನು ಸಂಪರ್ಕಿಸಿ ಶಾಸಕರ ಗಮನಕ್ಕೂ ತಂದಾಗ ಅವರು ಕೂಡ ಜಿಲ್ಲಾಡಳಿತ ದೊಂದಿಗೆ ಚರ್ಚೆ ನಡೆಸಿ ತಾವೂ ಕೂಡ ಸ್ಥಳಕ್ಕೆ ಧಾವಿಸಿದರು. ಲಕ್ಷ್ಮಣ ತೀರ್ಥದಲ್ಲಿ ಭಾರಿ ಪ್ರವಾಹದಿಂದಾಗಿ ಸಾಮಾನ್ಯ ರ್ಯಾಫ್ಟ್‍ಗಳನ್ನು ತರಿಸಿದರೂ ಪ್ರಯೋಜನವಾಗಲಿಲ್ಲ.