ಮಡಿಕೇರಿ, ಆ. 8: ಕತ್ತಲೆಕಾಡಿಗೆ ಸೇರಿದ ಜೇನುಕೊಲ್ಲಿ ಪೈಸಾರಿ, ಕ್ಲೋಸ್‍ಬರ್ನ್, ವಾಟೆಕಾಡು ಸುತ್ತಮುತ್ತ ಸುಮಾರು 4 ದಿನಗಳಿಂದ ವಿದ್ಯುತ್ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಇಂದು ನಿನ್ನೆಯ ತೊಂದರೆಯಲ್ಲ. ಪ್ರತಿ ವರ್ಷವೂ ಸ್ವಲ್ಪ ಮಳೆ ಬಂತೆಂದರೆ ಜನ ಕತ್ತಲೆಯಲ್ಲಿರು ವಂತಾಗಿದೆ. ತೋಟದ ಮಾಲೀಕರುಗಳು ಮರಗಳನ್ನು ಕಡಿಯದೆ ಗ್ರಾಮದ ನಿವಾಸಿಗಳು ಪ್ರತಿ ಮಳೆಗಾಲದಲ್ಲಿ ಕತ್ತಲೆಯಲ್ಲಿ ಕೂರುವಂತಾಗಿದೆ. ಹೀಗೆ ಮರಗಳು ಉರುಳಿದರೆ ಸೆಸ್ಕ್ ಸಿಬ್ಬಂದಿಗಳಾದರೂ ಏನು ಮಾಡಿಯಾರು? ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿ ಇಲ್ಲಿನ ನಿವಾಸಿಗಳು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.