ಮಡಿಕೇರಿ, ಆ. 8: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ರಾಜ್ಯ ಮಾಜಿ ಮುಖ್ಯಮುಂತ್ರಿ ಡಿ.ವಿ. ಸದಾನಂದಗೌಡ ಅವರುತಾ. 9ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ ಮಡಿಕೇರಿಯ ಸರಕಾರಿ ಅತಿಥಿ ಗೃಹಕ್ಕೆ ಆಗಮಿಸುವರು.

ಇಂದು ಡಿವಿಎಸ್ ಭೇಟಿ(ಮೊದಲ ಪುಟದಿಂದ) 11.30ಕ್ಕೆ ನೆರೆ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಂಪಾಜೆ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ ಎಂದು ಆಪ್ತ ಸಹಾಯಕ ಬಿ.ಎಸ್. ಕೊಟ್ರೇಶ್ ತಿಳಿಸಿದ್ದಾರೆ.

ಈಶ್ವರಪ್ಪ ಭೇಟಿಭಾರತೀಯ ಜನತಾ ಪಾರ್ಟಿಯಿಂದ ಮಳೆ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಸಮೀಕ್ಷಾ ತಂಡಗಳನ್ನು ನಿಯೋಜಿಸಿದ್ದು, ಕೊಡಗು ಜಿಲ್ಲೆಗೆ ಈಶ್ವರಪ್ಪ ನೇತೃತ್ವದ ತಂಡ ತಾ. 9ರಂದು (ಇಂದು) ಭೇಟಿ ನೀಡಲಿದೆ. ಬೆಳಿಗ್ಗೆ 9 ಗಂಟೆಗೆ ಕುಶಾಲನಗರ, 10 ಗಂಟೆಗೆ ಮಡಿಕೇರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಿದೆ. ತಂಡದಲ್ಲಿ ಜಿಲ್ಲೆಯ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಅವರುಗಳಿದ್ದಾರೆ.