ಮೂರ್ನಾಡು, ಆ. 7: ಜಮ್ಮು-ಕಾಶ್ಮೀರದಲ್ಲಿನ ಆರ್ಟಿಕಲ್ 35ಎ ಹಾಗೂ 370ನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ದಿಟ್ಟ ಕ್ರಮವನ್ನು ಸ್ವಾಗತಿಸಿ ಇಂದು ಮೂರ್ನಾಡುವಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಸುರಿಯುತ್ತಿದ್ದ ಮಳೆಯ ನಡುವೆಯೂ ಕೇಂದ್ರದ ದೃಢ ನಿರ್ಧಾರವನ್ನು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಲಾಯಿತು. ಬಿಜೆಪಿ ಪ್ರಮುಖರಾದ ಬೆಲ್ಲು ಸೋಮಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ಪಳಂಗಂಡ ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಪುದಿಯೊಕ್ಕಡ ಮಧುಕುಮಾರ್, ಮುಂಡಂಡ ಕುಟ್ಟಪ್ಪ, ಪುದಿಯೊಕ್ಕಡ ರಮೇಶ್ ಬಜರಂಗದಳದ ಚೇತನ್ ಮತ್ತಿತರರು ಪ್ರಮುಖರು ಪಾಲ್ಗೊಂಡಿದ್ದರು.