ಮಡಿಕೇರಿ, ಆ. 7: ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ತಾ. 18 ರಂದು ಸಂಘದ ಅಧ್ಯಕ್ಷÀ ಮಹಾಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ಮೂರ್ನಾಡು ಬಲಮುರಿಯ ಕಣ್ವ ಮುನೀಶ್ವರ ಧಾರ್ಮಿಕ ಸಭಾ ಭವನದಲ್ಲಿ ಸಭೆ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಸ್. ರಾಮ್ ಭಟ್ ಹಾಗೂ ಖಜಾಂಚಿ ಹೆಚ್.ಆರ್. ಮುರಳಿ ತಿಳಿಸಿದ್ದಾರೆ.