ಮಡಿಕೇರಿ, ಆ. 7: ಇಲ್ಲಿನ ಚಾಮುಂಡೇಶ್ವರಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೆಳಗಿನ ರಸ್ತೆಯಲ್ಲಿ ಹಲವು ಮನೆಗಳು ಇದ್ದು, ಇಂದು ಮಧ್ಯಾಹ್ನ ಮರದ ಕೊಂಬೆ ಬಿದ್ದು ವಿದ್ಯುತ್ ಕಂಬ ಬಾಗಿಕೊಂಡಿದೆ. ಮನೆಗಳಲ್ಲಿ ವಿದ್ಯುತ್ ಇಲ್ಲದೆ ಇಲ್ಲಿನ ನಿವಾಸಿಗಳು ಅತಂತ್ರಸ್ಥಿತಿಯಲ್ಲಿದ್ದಾರೆ. ಇಲ್ಲಿನ ಕೆಲವು ನಿವಾಸಿಗಳು ಹಲವು ಮೆಟ್ಟಿಲುಗಳನ್ನು ಹತ್ತಿ-ಇಳಿದುಕೊಂಡು ಹೋಗಬೇಕಾಗುತ್ತದೆ. ಕೆಲ ನಿವಾಸಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿಕೊಂಡು ಹೋಗುವವರು ಇದ್ದಾರೆ. ಸೆಸ್ಕಾಂ ಕಚೇರಿಗೆ ಕರೆ ಮಾಡಿದ್ದರೂ ಸಿಬ್ಬಂದಿಗಳು ಬಂದು ನೋಡಿ ಹಾಗೆನೆ ತೆರಳಿರುತ್ತಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.