ವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣ ಪಂಚಾಯಿತಿ ಹಾಗೂ ಇಲ್ಲಿನ ಲೋಕೋಪಯೋಗಿ ಸಹಭಾಗಿತ್ವದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು, ಕ್ಷೇತ್ರದ ಶಾಸಕರು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಗಲೀಕರಣ ರಸ್ತೆಯ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿ ರಸ್ತೆ ಅಗಲೀಕರಣದ ವಿಧಿ ವಿಧಾನ ನಿಗದಿತ ಅಳತೆಯ ಅಂತಿಮ ತೀರ್ಮಾನ ಕೈಗೊಳ್ಳುವಂತೆ ನಿರ್ಧರಿಸಲಾಯಿತು.
ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಪುರಂದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೀರಾಜಪೇಟೆ ಮಗ್ಗುಲ ಮೀನುಪೇಟೆ ಗಡಿಯವರೆಗಿನ ರಸ್ತೆಯನ್ನು ವಿಸ್ತರಿಸಲು ಬಂದಿರುವ ಪ್ರಸ್ತಾವನೆ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇಂದು ಬೆಳಗಿನಿಂದಲೇ ಮುಖ್ಯ ರಸ್ತೆಯಲ್ಲಿ ಅಗಲೀಕರಣಕ್ಕೆ ಕಟ್ಟಡಗಳನ್ನು ಗುರುತು ಮಾಡಿದ ಪ್ರಕರಣದಲ್ಲಿ ಸಭೆಯಲ್ಲಿ ಗೊಂದಲ ಉಂಟಾಯಿತು.
ಮುಖ್ಯಾಧಿಕಾರಿ ಅವರು ಚುನಾಯಿತ ಸದಸ್ಯರುಗಳಿಗೆ ಯಾವದೇ ಸೂಚನೆ ನೀಡದೆ ರಸ್ತೆ ಅಗಲೀಕರಣದ ಪ್ರಕ್ರಿಯೆಗೆ ಚಾಲನೆ ನೀಡಿರುವದಕ್ಕೆ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್, ಎಸ್.ಹೆಚ್. ಮತೀನ್, ಎಂ.ಕೆ. ದೇಚಮ್ಮ, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ ಇತರರು ತಹಶೀಲ್ದಾರ್ ಅವರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರಲ್ಲದೆ ಸದಸ್ಯರುಗಳನ್ನು ಕಡೆಗಣಿಸಿರುವ ದರಿಂದ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಈ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಸದಸ್ಯರುಗಳ ತರಾಟೆಗೆ ಸಮಜಾಯಿಷಿಕೆ ನೀಡಿದ ತಹಶೀಲ್ದಾರ್ ಪುರಂದರ ಅವರು ಇದೊಂದು ಅನೌ ಪಚಾರಿಕ ಸಭೆ ರಸ್ತೆ ಅಗಲೀಕರಣಕ್ಕೆ ಎಲ್ಲರೂ ಸೇರಿ ಮುಕ್ತವಾಗಿ ಚಿರ್ಚಿಸಿ ನಿರ್ಧಾರಕ್ಕೆ ಬರೋಣ ಎಲ್ಲರೂ ಸಹಕರಿಸಿ ಎಂದು ವಿನಂತಿಸಿದರು.
ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಅವಕಾಶ ಸಿಕ್ಕಿದಾಗ ಸದಸ್ಯರುಗಳೊಂದಿಗೆ ಚರ್ಚಿಸಿದ್ದೇನೆ. ಇದು ಅವರ ಗಮನಕ್ಕೆ ಬಂದಿಲ್ಲ ಎಂಬಂತೆ ಕಾಣುತ್ತದೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ. ಸಭೆಗೆ ಸಹಕರಿಸುವಂತೆ ಕೋರಿದರು.
ರಸ್ತೆ ಅಗಲೀಕರಣದ ಮೊದಲು ನಿವಾಸಿಗಳ, ವರ್ತಕರ ಆಸ್ತಿ ಪಾಸ್ತಿಗೆ ನಷ್ಟವಾಗದಂತೆ ನಿಗಾವಹಿಸಬೇಕು. ಕೊಡಗಿನ ವೀರಾಜಪೇಟೆ ಮಲನಾಡು ಪ್ರದೇಶವಾದ್ದರಿಂದ ಮಿತಿಗೊಳಪಟ್ಟು ವೀರಾಜಪೇಟೆ ಪಟ್ಟಣ ಹಿಂದಿ ನಂತೆಯೇ ಶಾಶ್ವತವಾಗಿ ಉಳಿಯು ವಂತಹ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡಬೇಕು. ರಸ್ತೆ ಅಗಲೀಕರಣದ ಸಂದರ್ಭ ಇಂದಿನ ಮಾರುಕಟ್ಟೆ ಗನುಗುಣವಾಗಿ ಪರಿಹಾರ ನೀಡಬೇಕು. ಪರಿಹಾರ ನೀಡದೆ ಯಾವದೇ ಕಟ್ಟಡಗಳನ್ನು ಕೆಡವಿ ಜಾಗ ತೆರವು ಮಾಡಿ ಕೊಡಲು ಸಾಧ್ಯವಿಲ್ಲ ಎಂದು ಕೆಲವು ಸದಸ್ಯರುಗಳು ಸಭೆಗೆ ತಿಳಿಸಿದರು.
ಸಭೆಯನ್ನುದ್ದೇಶಿಸಿ ಲೋಕೋಪ ಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಎಂ. ಸುರೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ, ಹಿರಿಯ ವಕೀಲ ಎಸ್.ಆರ್. ಜಗದೀಶ್ ಮಾತನಾಡಿದರು. ಲೋಕೋಪ ಯೋಗಿ ಇಲಾಖೆಯ ಇಂಜಿನಿಯರ್ ಸತೀಶ್À ಉಪಸ್ಥಿತರಿದ್ದರು.