ಗೋಣಿಕೊಪ್ಪ ವರದಿ, ಆ. 6: ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲದಲ್ಲಿರುವ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಕಕ್ಕಡ ಪದ್ನೆಟ್ಟ್ ಆಚರಣೆ ನಡೆಯಿತು.
ದೇವರಿಗೆ ದೀಪವಿಟ್ಟು ಪೂಜಿಸುವ ಮೂಲಕ ಆಚರಣೆಗೆ ಚಾಲನೆ ನೀಡಲಾಯಿತು. ಕೊಡಗಿಗೆ ಉತ್ತಮ ಮಳೆ, ಬೆಳೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಹಬ್ಬದ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಯುವ ಸಮೂಹ ಕೂಡ ಇಂತಹ ಅಚರಣೆಗಳನ್ನು ಮುಂದುವರಿಸಿ ಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ನಂತರ ಒಂದಾಗಿ ಮದ್ದ್ಪುಟ್ಟ್ ಸವಿಯುವ ಮೂಲಕ ಸಹಭೋಜನ ದಲ್ಲಿ ಪಾಲ್ಗೊಂಡರು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಸರಾ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಖಜಾಂಜಿ ಪಾನಿಕುಟ್ಟೀರ ಕುಟ್ಟಪ್ಪ, ನಿರ್ದೇಶಕರಾದ ಕೊಪ್ಪಡ ಪಳಂಗಪ್ಪ, ಪಂದಿಕಂಡ ಸುನಾ, ತಂಬಂಡ ಮಂಜುನಾಥ್, ಕೊಕ್ಕೇರ ಸನ್ನಿ, ಮೂರೀರ ಕುಶಾಲಪ್ಪ, ಮಲ್ಲಾಡ ಸುತಾ, ಚೋವಂಡ ಇಂದಿರಾ, ಮೂರೀರ ಶಾಂತಿ ಪಾಲ್ಗೊಂಡಿದ್ದರು.