ಮಡಿಕೇರಿ, ಆ. 6: ಮಾರುತಿ ವ್ಯಾನೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಇನ್ನಿಬ್ಬರು ಸಣ್ಣ ಪುಟ್ಟ ಗಾಯಕ್ಕೊಳಗಾಗಿರುವ ಘಟನೆ ವರದಿಯಾಗಿದೆ. ಕುಶಾಲನಗರ ಸಮೀಪದ ಆವರ್ತಿಯಿಂದ ಮಡಿಕೇರಿಗೆ ತೆರಳುತ್ತಿದ್ದ ಮಾರುತಿ ವ್ಯಾನ್ ಮಾರ್ಗಮಧ್ಯದ ಕೆದಕಲ್‍ನಲ್ಲಿ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಬೈಕ್‍ಗೆ ಡಿಕ್ಕಿ ಪಡಿಸಿದೆ.
ಮಾರುತಿ ವ್ಯಾನ್ ಅಪ್ಪಳಿಸಿದ ರಭಸಕ್ಕೆ ಕೆಳಗೆ ಬಿದ್ದ ಬೈಕ್ ಸವಾರ ಕೆದಕಲ್‍ನ ಶಶಿ ನಾಯರ್ ಎಂಬವರ ಮಗ ಸತೀಶ್ ನಾಯರ್ (29) ತಲೆ ಮತ್ತು ಎದೆ ಭಾಗಕ್ಕೆ ತೀವ್ರವಾದ ಗಾಯವಾಗಿದೆ. ಗಾಯಾಳುವಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೈಕಿನ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಸತೀಶ್ ನಾಯರ್ ಅವರ ಸಹೋದರ ಶರತ್ ನಾಯರ್ (27) ಮತ್ತು ವ್ಯಾನಿನಲ್ಲಿದ್ದ ಆಯಿಶಾ ಎಂಬ ಮಹಿಳೆಗೆ ಸಣ್ಣ ಪುಟ್ಟ ಗಾಯ ವಾಗಿದ್ದು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಮಾರುತಿ ವ್ಯಾನಿನಲ್ಲಿದ್ದವರು ಮಡಿಕೇರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು ಎಂದು ಹೇಳಲಾಗಿದೆ.