ಸುಂಟಿಕೊಪ್ಪ, ಆ. 6: ಸೈಯದ್ ಮಹಮ್ಮದಾಲಿ ಶಿಹಾಬ್ ತಂಙಳ್ ಅವರ 10ನೇ ಸ್ಮರಣಾರ್ಥ ಸಭೆ ಮಹಮ್ಮದಾಲಿ ಶಿಹಬ್ ತಂಙಳ್ ಜೂನಿಯರ್ ಶೆರೀಯತ್ ಕಾಲೇಜಿನಲ್ಲಿ ನಡೆಸಲಾಯಿತು. ಕಾಲೇಜಿನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವೈ.ಎಂ. ಉಮ್ಮರ್ ಫೈಝಿ ವಹಿಸಿದ್ದರು.
ಉದ್ಘಾಟನೆಯನ್ನು ಉಸ್ಮಾನ್ ಫೈಝಿ ನೆರವೇರಿಸಿದರು. ಅತಿಥಿಗಳಾಗಿ ಮಡಿಕೇರಿಯ ಎಂ. ತಮ್ಲೀಖ್ ದಾರಿಮಿ, ಅಬ್ದಲ್ ಜಬ್ಬಾರ್ ಮುಸ್ಲಿಯಾರ್, ಜಂಶೀರ್ ವಾಫಿ, ಜೈನುದ್ದೀನ್ ಫೈಜಿ, ಸಿದ್ದಿಖ್ ಬಾಖವಿ, ಮಜಿದ್ ಮುಸ್ಲಿಯರ್, ಸಿದ್ದಾಪುರದ ಎನ್.ಎಂ. ಹರಿಹರ ಪಾಲ್ಗೊಂಡಿದ್ದರು. ಸಿ.ಎಂ. ಹಮ್ಮೀದ್ ಮೌಲವಿ ಶಾಂತಿ ಯನ್ನು ಕಾಯ್ದುಕೊಳ್ಳುವಂತೆ ಕರೆಕೊಟ್ಟರು.