ಗುಡ್ಡೆಹೊಸೂರು, ಆ. 6: ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಕೀಟನಾಶಕ ಬಳಕೆ ಮತ್ತು ಅಣಬೆ ಬೇಸಾಯದ ಬಗ್ಗೆ ತರಬೇತಿ ನೀಡಲಾಯಿತು. ಕೃಷಿ ಇಲಾಖಾಧಿ ಕಾರಿ ಪೂಣಚ್ಚ, ವಿರೇಂದ್ರ ಪಾಟೀಲ್ ಬೀಜೋಪಚಾರ ಮತ್ತು ಕೀಟನಾಶಕಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖಾಧಿಕಾರಿ ಕಾವ್ಯ ಅಣಬೆ ಬೇಸಾಯದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಪುಷ್ಪ, ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ಪಿ.ಡಿ.ಓ. ಶ್ಯಾಂ, ಪ್ರಗತಿಪರ ರೈತ ಬಿ.ಎಸ್. ಧನಪಾಲ್, ಹಾಜರಿದ್ದರು. ಕೃಷಿ ಅಧಿಕಾರಿ ಮಾತನಾಡಿ, ಭತ್ತದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಇಲಾಖಾ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಶಾರದ ಮತ್ತು ಲೆಕ್ಕಾಧಿಕಾರಿ ಸುನಿಲ್ ಹಾಜರಿದ್ದರು. ಕಾರ್ಯಾಗಾರದಲ್ಲಿ ಕಾವೇರಪ್ಪ, ಭೀಮಯ್ಯ, ರವಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.