ಮಡಿಕೇರಿ, ಆ. 6: ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರಿಯಲ್ಲಿ ಕೊಡಗು ಜಿಲ್ಲೆಯ ಸಾವಿರಾರು ಮಂದಿ ನೆಲಸಿದ್ದು ಇಲ್ಲಿ ಕೊಡಗು ಜಿಲ್ಲೆಯ ವಿವಿಧ ವ್ಯಾಪ್ತಿಗೆ ಒಳಪಟ್ಟ ಹಲವಾರು ಸಂಘಟನೆಗಳು ರಚನೆಯಾಗಿವೆ. ಏಳ್‍ನಾಡ್ ಕೊಡವ ಸಂಘ, ನಾಲ್‍ನಾಡ್ ಸಂಘ ಈ ರೀತಿಯಾಗಿ ಕೊಡಗಿನ ಹಲವು ನಾಡ್‍ಗಳ ನಿವಾಸಿಗಳನ್ನು ಒಳಗೊಂಡಂತಹ ಸಂಘ ರಚನೆಗೊಂಡಿದ್ದು, ಇದೀಗ ನೂತನವಾಗಿ ಕಿಗ್ಗಟ್ಟ್‍ನಾಡ್ ಕೊಡವ ಸಂಘ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ಬೆಂಗಳೂರು ವಸಂತನಗರ ಕೊಡವ ಸಮಾಜ ದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಸಂಘ ಉದ್ಘಾಟನೆ ಗೊಂಡಿದೆ. ನೂತನ ಸಂಘದ ಅಧ್ಯಕ್ಷರಾಗಿ ಮಂಡಚಂಡ ಸುರೇಶ್ ಪೂಣಚ್ಚ, ಉಪಾಧ್ಯಕ್ಷರಾಗಿ ಚೆಪ್ಪುಡೀರ ಮನೋಜ್ ಸುಬ್ಬಯ್ಯ, ಕಾರ್ಯದರ್ಶಿ ಯಾಗಿ ಚೊಟ್ಟಂಗಡ ಲೋಕೇಶ್ ಗಣಪತಿ, ಜಂಟಿ ಕಾರ್ಯದರ್ಶಿಯಾಗಿ ಗುಡ್ಡಮಾಡ ಸದಾ ತಮ್ಮಯ್ಯ, ಖಜಾಂಚಿಯಾಗಿ ಮಾಚಿಮಾಡ ಕುಶಾಲಪ್ಪ ಹಾಗೂ ಜಂಟಿ ಖಜಾಂಚಿಯಾಗಿ ಬಲ್ಲಿಮಾಡ ಟಿಟ್ಟು ಮೋಹನ್ ಅವರು ನೇಮಕ ಗೊಂಡಿದ್ದಾರೆ. ನಿರ್ದೇಶಕರುಗಳಾಗಿ ಇತರ 17 ಮಂದಿ ಆಯ್ಕೆಗೊಂಡಿದ್ದು, ಸದಸ್ಯತ್ವ ಮತ್ತಿತರ ಮಾಹಿತಿಗೆ ಸುರೇಶ್ ಪೂಣಚ್ಚ (9448066894) ಅವರನ್ನು ಸಂಪರ್ಕಿಸಬಹುದಾಗಿದೆ.