ಮಡಿಕೇರಿ, ಆ. 6: ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 19 ರಂದು ವಿಶ್ವಛಾಯಾಗ್ರಾಹಕರ ದಿನಾಚರಣೆಯನ್ನು ನಡೆಸಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಸಂಚಾಲಕರಾಗಿ ಆರ್.ಆರ್.ಮನೋಜ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ಸದಸ್ಯರಾದವರಿಗೆ ಉತ್ತಮ ವೀಡಿಯೋಗ್ರಫಿ ಹಾಗೂ ಉತ್ತಮ ಫೋಟೋಗ್ರಫಿಗಾಗಿ ಬಹುಮಾನ ನೀಡಲು ನಿರ್ಧರಿಸಲಾಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಾ. 8 ರೊಳಗೆ ಸಂಘದ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಾ. 13 ರಂದು ಪತ್ರಿಕಾಭವನಕ್ಕೆ ಆಗಮಿಸಿ ಅದೇ ದಿನ ಕೊಡುವ ವಿಷಯದ ಬಗ್ಗೆ ಫೋಟೋ ಅಥವಾ ವೀಡಿಯೋ ಮಾಡಬೇಕಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾನಲ್ ಕ್ಯಾಮೆರಾಮೆನ್‍ಗಳು ವೀಡಿಯೋಗ್ರಫಿಗಾಗಿ ಮಾತ್ರ ಹೆಸರು ನೀಡಬೇಕಾಗಿದೆ. ಉಳಿದವರು ವೀಡಿಯೋಗ್ರಫಿ ಅಥವಾ ಫೋಟೋಗ್ರಫಿ ಯಾವದಾದರು ಒಂದನ್ನು ಆಯ್ಕೆ ಮಾಡಿಕೊಂಡು ಹೆಸರು ನೀಡಬಹುದಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಕೋರಿಕೊಂಡಿದ್ದಾರೆ. ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿ ಆನಂದ್ ಕೊಡಗು, ಖಜಾಂಚಿ ಅರುಣ್ ಕೂರ್ಗ್, ನಿರ್ದೇಶಕರುಗಳಾದ ಮನೋಜ್ ಆರ್.ಆರ್,ಕೆ.ಬಿ.ದಿವಾಕರ್, ನಾಸೀರ್ ಎಂ.ಎನ್, ಯಶೋಧ, ಕುಪ್ಪಂಡ ದತ್ತಾತ್ರಿ , ಕುಡೆಕಲ್ ಗಣೇಶ್, ನವೀನ್ ಸುವರ್ಣ, ಮಲ್ಲಿಕಾರ್ಜುನ, ಟಿ.ಕೆ. ಸಂತೋಷ್ ಹಾಜರಿದ್ದರು.