ಸಿದ್ದಾಪುರ, ಆ. 6: ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಕೊಮ್ಮೆತೋಡು-ಹಾತೂರು ರಸ್ತೆಯ ಚೋಕಂಡಳ್ಳಿ ಎಂಬಲ್ಲಿ ಅಕ್ರಮವಾಗಿ (ಕೆಎಲ್ 47 ಡಿ 1157) ಈಚರ್ ಮಿನಿ ಲಾರಿಯಲ್ಲಿ ತರಕಾರಿ ಅಡಿಯಲ್ಲಿ ಬೀಟೆ ಮರ ತುಂಬಿಸಿ ಸಾಗಿಸುತ್ತಿದ್ದುದನ್ನು ವೀರಾಜಪೇಟೆ ಅರಣ್ಯ ವಲಯ ಸಿಬ್ಬಂದಿ ಪತ್ತೆ ಹಚ್ಚಿ ವಾಹನ ಸೇರಿದಂತೆ ಅಂದಾಜು ಎಂಟು ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಷಣಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್, ಅನಿಲ್ ಕುಮಾರ್ ಚೌವ್ಹಾಣ್, ಅರಣ್ಯ ರಕ್ಷಕ ಅರುಣ, ಚಂದ್ರಶೇಖರ್, ನಾಗರಾಜ, ಪ್ರಶಾಂತ್, ಸಿಬ್ಬಂದಿಗಳಾದ ಶಿವರಾಜ್, ಮಧು, ಅನಿಲ್ ಹಾಗೂ ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.