ಶ್ರೀಮಂಗಲ, ಆ. 4: ದೇಶ ಮತ್ತು ಕೊಡಗಿನ ರಕ್ಷಣೆಗೆ ಮುಂದಾಗಿ ತ್ಯಾಗ ಮಾಡಿದ ಹಿನ್ನೆಲೆ ಇಂದು ತಮ್ಮ ತಾಯಿ ನೆಲದಲ್ಲೆ ಕೊಡವರು ಅಲ್ಪಸಂಖ್ಯಾತರಾಗಿದ್ದಾರೆ. ಇದರಿಂದ ತಾಯಿ ನೆಲದಲ್ಲೆ ಅಭದ್ರತೆ ಕಾಡುತ್ತಿದೆ. ನಮ್ಮ ಸಂವಿಧಾನ ಶ್ರೇಷ್ಠವಾಗಿದ್ದು, ಕೊಡವರ ರಕ್ಷಣೆಗೆ ದೊರೆಯಬೇಕಾದ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಅವರು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕ್‍ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗ ಆಯೋಜಿಸಿದ್ದ 8ನೇ ವರ್ಷದ ಕಕ್ಕಡ ಪದಿನೆಟ್ಟ್ ಹಬ್ಬದ ಪಂಜಿನ ಮೆರವಣಿಗೆ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಜಾಗತೀಕರಣ ಮತ್ತು ಅಧುನೀಕರಣದ ಭರಾಟೆಯಲ್ಲಿ ಸಂಸ್ಕøತಿಯನ್ನು ಉಳಿಸಿಕೊಂಡಿದ್ದಾರೆ. ಪಾಕಿಸ್ತಾನದೊಂದಿಗೆ 4 ಯುದ್ಧ, ಚೀನ ಯುದ್ಧ, ಎರಡನೇ ವಿಶ್ವ ಮಹಾಯುದ್ಧ ಮತ್ತು, ದೇವಟ್‍ಪರಂಬ್ ಹತ್ಯಾಕಾಂಡದಂತಹ ಘಟನೆಗಳಿಂದ ಸಾವಿರಾರು ಕೊಡವರು ಪ್ರಾಣತ್ಯಾಗ ಮಾಡಿದ್ದಾರೆ, ಇದರಿಂದ 1200 ಇದ್ದ ಕುಟುಂಬ 848ಕ್ಕೆ ಕುಸಿದಿದೆ ಎಂದು ವಿವರಿಸಿದರು. ಮತ್ತೋರ್ವ ಮುಖ್ಯ ಅತಿಥಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್‍ಬೋಪಯ್ಯ ಮಾತನಾಡಿ ಇಂತಹ ಕಾರ್ಯಕ್ರಮ ಮಾಡುವದು ಕೇವಲ ತಿನ್ನಲು ಕುಡಿಯಲು ಅಲ್ಲ. ನಮ್ಮ ಪದ್ಧತಿ, ಪರಂಪರೆ ಆಚರಣೆ ಮೂಲಕ ಉಳಿಯಬೇಕು ಎನ್ನುವದಕ್ಕಾಗಿದೆ. ಕೊಡವ ಸಂಸ್ಕøತಿ ಉಳಿಯಲು ಹಬ್ಬಗಳನ್ನು ಕೇವಲ ಮನೆಯೊಳಗೆ ಆಚರಿಸದೇ ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್‍ಗ್ಗಟ್ಟ್ ನಾಡ್ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜನಂಜಪ್ಪ ಕೊಡವ ಸಂಸ್ಕøತಿ ಉಳಿಸಿ ಬೆಳಸಿಕೊಂಡು ಬರುವಲ್ಲಿ ತಾಯಂದಿಯರ ಪಾತ್ರ ಪ್ರಧಾನವಾಗಿದೆ, ಅ ಕೊಡವ ಜನಾಂಗಕ್ಕೆ ಮಾರಕವಾಗಿರುವ ಅಂತರ್‍ಜಾತಿ ವಿವಾಹ ಮತ್ತು ಮತಾಂತರದತ್ತ ಯಾರು ಒಲವು ತೋರಿಸುವಂತಾಗಬಾರದು ಎಂದರು.
ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ 10ನೇ ತರಗತಿಯ ಐ.ಸಿ.ಎಸ್.ಸಿ. ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅಜ್ಜಮಾಡ ಬಿ. ದೇವಯ್ಯ, ಅಂvರ್ರಾಷ್ಟ್ರೀಯ ಹಾಕಿ ಆಟಗಾರ ಆಲೇಮಾಡ ಬಿ.ಚೀಯಣ್ಣ ಅವರನ್ನು ಸನ್ಮಾನಿಸಲಾಯಿತು.
ನಿರ್ಣಯ: ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ಸ್ಥಾನ ಮಾನಕ್ಕೆ ಒತ್ತಾಯಿಸಿ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಬೆಕ್ಕೆಸೊಡ್ಲೂರು ಮಂದತವ್ವ ಟ್ರಸ್ಟ್ ಮತ್ತು ಪೊನ್ನಂಪೇಟೆ ಕೊಡವ ಸಮಾಜ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಮತು ್ತಕೊಡವ ಹಾಡುಗಳ ಆರ್ಕೆಸ್ಟ್ರಾ ಜನರನ್ನು ರಂಜಿಸಿತ್ತು.
ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡಂಗಡ ಕೌಶಿಕ್, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ ಮತ್ತಿತರರು ಹಾಜರಿದ್ದರು. ಕಳ್ಳಚಂಡ ದೀನಕೃಷ್ಣ ಪ್ರಾರ್ಥಿಸಿ, ಕಾಳಿಮಾಡ ಮೋಟಯ್ಯ ಸ್ವಾಗತಿಸಿ, ಸನ್ಮಾನಿತರ ಪರಿಚಯವನ್ನು ಚೆಪ್ಪುಡೀರ ರಾಕೇಶ್ ದೇವಯ್ಯ ಮಾಡಿದರು. ಮಲ್ಲಮಾಡ ಪ್ರಭುಪೂಣಚ್ಚ ವಂದಿಸಿದರು.