ಕುಶಾಲನಗರ, ಆ. 3: ಮೈಸೂರಿನಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪ ಭಾರತ್‍ಮಾತಾ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾರತ್‍ಮಾತಾ ಶಾಲಾ ವಿದ್ಯಾರ್ಥಿಗಳಾದ ಶ್ರೇಯಸ್, ಸ್ವಸ್ತಿಕ್ ಮತ್ತು ಸ್ಫೂರ್ತಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿಶನ್, ಸುಚಿತ ಮತ್ತು ಕ್ಷಿತಿಜ್ ಪತಾಕ್ ಅವರುಗಳು ದ್ವಿತೀಯ ಸ್ಥಾನಗಳಿಸಿದ್ದು, ಶ್ರದ್ಧಾ, ಟೀನಾ, ನಿದಾ ಮತ್ತು ಹೇಮಾವತಿ ತೃತೀಯ ಸ್ಥಾನ ಗಳಿಸಿದ್ದಾರೆ.