ಶ್ರೀಮಂಗಲ, ಆ. 3: ಪೊನ್ನಂಪೇಟೆ ಕ್ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗ ಆಶ್ರಯದಲ್ಲಿ ಕಕ್ಕಡ ಪದಿನೆಟ್ಟ್ ನಮ್ಮೆ ಪ್ರಯುಕ್ತ ಶನಿವಾರ ಸಂಜೆ 8ನೇ ವರ್ಷದ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.ಪೊನ್ನಂಪೇಟೆ ಕೊಡವ ಸಮಾಜದಿಂದ ಸಾಂಪ್ರದಾಯಿಕ ಒಡ್ಡೋಲಗದೊಂದಿಗೆ ಹೊರಟ ಪಂಜಿನ ಮೆರವಣಿಗೆ ಮುಖ್ಯ ಬೀದಿಯಲ್ಲಿ ಸಾಗಿ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಇಲ್ಲಿನ ಬಸ್ ನಿಲ್ದಾಣದ ಮೂಲಕ ಬಂದು ಪೊನ್ನಂಪೇಟೆ ಕೊಡವ ಸಮಾಜಕ್ಕೆ ತಲಪಿತು. ಈ ಸಂದರ್ಭ ಕಕ್ಕಡ ಪದ್ನೆಟ್ಟ್ ವಿಶೇಷವಾದ ಸಾಂಪ್ರದಾಯಿಕ “ಮದ್ದ್ ಪುಟ್ಟ್” ಸೇವಿಸಿ, ಸಂತೋಷ ಹಂಚಿಕೊಂಡರು. ಮಹಿಳೆಯರು ಮಕ್ಕಳು
(ಮೊದಲ ಪುಟದಿಂದ) ಬಸ್ ನಿಲ್ದಾಣದಲ್ಲಿ ಸಾಮೂಹಿಕವಾಗಿ ಒಡ್ಡೋಲಗಕ್ಕೆ ಕೆಲ ಕಾಲ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕ್ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗ ಅಧ್ಯಕ್ಷ ರಾಜನಂಜಪ್ಪ, ಕಾರ್ಯದರ್ಶಿ ಕೌಶಿಕ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್ ಮತ್ತು ಪದಾಧಿಕಾರಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡರು.