ಗೋಣಿಕೊಪ್ಪ ವರದಿ, ಆ. 3: ಜಿಲ್ಲಾ ಪಂಚಾಯಿತಿ ಗಿರಿಜನ ಉಪಯೋಜನೆ ಅನುದಾನದಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸುಮಾರು ರೂ. 49 ಲಕ್ಷ ಅನುದಾನದ ಮೂರು ಕುಡಿಯುವ ನೀರಿನ ಟ್ಯಾಂಕ್‍ಅನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ ಉದ್ಘಾಟಿಸಿದರು.
ಕಾರೆಕಂಡಿ ಹಾಡಿಯಲ್ಲಿ ರೂ. 20 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ 50 ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್, ಮಜ್ಜಿಗೆಹಳ್ಳ ಆನೆಕ್ಯಾಂಪ್ ಹಾಡಿ ಸಮೀಪ ರೂ. 9 ಲಕ್ಷ ಅನುದಾನದಲ್ಲಿ ಚೌಡಿಕಟ್ಟೆ ವ್ಯಾಪ್ತಿಲ್ಲಿ ರೂ. 20 ಲಕ್ಷ ಅನುದಾನದಲ್ಲಿ ನಿರ್ಮಿಸಿರುವ 50 ಸಾವಿರ ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್‍ನ್ನು ಉದ್ಘಾಟಿಸಿದರು.
ಈ ಸಂದರ್ಭ ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಸದಸ್ಯ ಸುಬ್ರು, ಪಿ.ಡಿ.ಓ. ಮಮತಾ, ಗಿರಿಜನ ಮುಖಂಡರಾದ ಮಲ್ಲಪ್ಪ, ರಾಮು, ಅರುಣ, ಪ್ರಮುಖರಾದ ವಿನಯ್‍ಕುಮಾರ್, ರಾಧಾಕೃಷ್ಣ, ಡಾ. ಮದ್ಯಸ್ತ ಇದ್ದರು.