ಕುಶಾಲನಗರ, ಆ. 1: ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಛತ್ರಪತಿ ಸಾಹುಮಹಾರಾಜ್ ಜನ್ಮದಿನಾಚರಣೆ ನಡೆಯಿತು. ಕುಶಾಲನಗರದ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹು ಮಹಾರಾಜ್ ಅವರ ಭಾವಚಿತ್ರಕ್ಕೆ ಪುಷ್ಪಾಹಾರ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಯು.ಟಿ. ರಾಮಯ್ಯ, ಖಜಾಂಚಿ ನಿಂಗರಾಜು, ನಿರ್ದೇಶಕರಾದ ಎ.ಎಸ್. ಜೋಯಪ್ಪ, ಸ್ವಾಮಿ, ಕಮಲಮ್ಮ ಮತ್ತಿತರರು ಇದ್ದರು.