ಗೋಣಿಕೊಪ್ಪ ವರದಿ, ಆ. 1: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಸಣ್ಣ ಮಟ್ಟದ ಕೃಷಿಕ ಬೆಸಗೂರು ಗ್ರಾಮದ ಕೊಕ್ಕಲೆಮಾಡ ಎಂ. ಸೋಮಯ್ಯಗೆ ಕೃಷಿ ಪರಿಕರ ನೀಡುವ ಮೂಲಕ ಪ್ರೋತ್ಸಾಹಿಸ ಲಾಯಿತು. ಕೃಷಿಕನ ಮನೆಗೆ ತೆರಳಿ ಕೃಷಿಗೆ ಬಳಸಲು ಅನುಕೂಲ ವಾಗುವಂತೆ ಗುದ್ದಲಿ, ಕತ್ತಿ ನೀಡಿ ಸಹಾಯ ಮಾಡಲಾಯಿತು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಪದಾಧಿಕಾರಿಗಳಾದ ಪುಳ್ಳಂಗಡ ನಟೇಶ್, ಮಂಡಂಗಡ ಅಶೋಕ್, ಕೊಣಿಯಂಡ ಸಂಜು ಉಪಸ್ಥಿತರಿದ್ದರು.