ಕುಶಾಲನಗರ, ಆ. 1: ಸೋಮವಾರಪೇಟೆ ತಾಲೂಕು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರಾಗಿ ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ. ವೆಂಕಟನಾಯಕ್ ಆಯ್ಕೆಯಾಗಿದ್ದಾರೆ.

ಕುಶಾಲನಗರದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಕಾರ್ಯದರ್ಶಿಯಾಗಿ ನಂಜರಾಯ ಪಟ್ಟಣ ಪ್ರೌಢಶಾಲೆ ಶಿಕ್ಷಕ ಹೆಚ್.ಬಿ. ಮೂರ್ತಿ, ಗೌರವಾಧ್ಯಕ್ಷರಾಗಿ ಮೂಕಾಂಬಿಕ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಎಸ್. ಗೋಪಾಲ್, ಖಜಾಂಚಿಯಾಗಿ ನಂಜರಾಯಪಟ್ಟಣ ಪ್ರೌಢಶಾಲೆ ಎಸ್. ನಾಗರಾಜು ಹಾಗೂ ನಿರ್ದೇಶಕರಾಗಿ ಕೊಡಗರಹಳ್ಳಿ ಪ್ರೌಢಶಾಲೆಯ ಎಸ್.ಎನ್. ದಿನೇಶ್, ಶನಿವಾರಸಂತೆ ಪ್ರೌಢಶಾಲೆಯ ಜಾದವ್, ಮಾದಾಪುರ ಪ್ರೌಢಶಾಲೆಯ ಅಶ್ವಿನಿ, ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಶ್ರೀಕಲಾ, ಕುಶಾಲನಗರ ಫಾತಿಮಾ ಪ್ರೌಢಶಾಲೆಯ ಜೆಫ್ರಿ, ಮೂಕಾಂಬಿಕ ಪ್ರೌಢಶಾಲೆಯ ಪ್ರತಾಪ್, ಕೊಡ್ಲಿಪೇಟೆ ಪದವಿಪೂರ್ವ ಕಾಲೇಜಿನ ಚಂದ್ರಶೇಖರ್ ಅಡ್ಮನಿ, ಸೋಮವಾರಪೇಟೆ ಎಸ್.ಜೆ.ಎಂ. ಪ್ರೌಢಶಾಲೆಯ ವಿರೂಪಾಕ್ಷಪ್ಪ ಆಯ್ಕೆಗೊಂಡಿದ್ದಾರೆ.