ಮಡಿಕೇರಿ, ಆ. 1: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಮೇಕೇರಿ ಗ್ರಾಮದಲ್ಲಿನ ವಿಶೇಷಚೇತನ ಸಾಧಕಿ ಈಶ್ವರಿ ಅವರಿಗೆ ಅಗತ್ಯ ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಯಿತು. ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಕಾರ್ಯದರ್ಶಿ ಶಫಾಲಿ ರೈ, ಖಚಾಂಚಿ ನಮಿತಾ ರೈ, ಸದಸ್ಯೆಯರಾದ ಶಮ್ಮಿ ಪ್ರಭು, ರೂಪಾ ಸುಮಂತ್, ಪ್ರಿಯಾ ಜಗದೀಶ್, ಲಲಿತಾ ರಾಘವನ್, ಬೊಳ್ಳು ಮೇದಪ್ಪ ಹಾಜರಿದ್ದರು.