ಗೋಣಿಕೊಪ್ಪಲು, ಆ. 1: ಕಾವೇರಿ ಕಾಲೇಜು ಗೋಣಿಕೊಪ್ಪಲಿನ ಎನ್.ಸಿ.ಸಿ. ಘಟಕದ ವತಿಯಿಂದ ತಿತಿಮತಿ ಅರಣ್ಯ ಪ್ರದೇಶದ ಒಳಗೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಘಟಕದ ಅಧಿಕಾರಿಗಳಾದ ರಮೇಶ್ ಭಾರತ ದೇಶವು ಬರ, ನೆರೆ ಚಂಡಮಾರುತ, ಭೂಕಂಪ, ಭೂ ಕುಸಿತದಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿದೆ. ಶೇ. 65 ರಷ್ಟು ಭೂಮಿ ಬರಗಾಲಕ್ಕೆ ಈಡಾಗುತ್ತಿದೆ. ವಿಕೋಪಗಳೆಲ್ಲವೂ ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣ, ಕೈಗಾರಿಕೆ ಮುಂತಾದ ಕಾರಣಗಳಿಂದ ಪರಿಸರದ ಅವನತಿ ಹವಾಮಾನದ ಬದಲಾವಣೆಗಳಿಗೆ ಕಾರಣವಾಗಿದೆ. ಜಾಗತಿಕವಾಗಿ ಪ್ರಕೃತಿ ವಿಕೋಪಗಳ ಬಗ್ಗೆ ಕಳವಳ ಆತಂಕಗಳು ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಸಿ.ಸಿ.ಅಧಿಕಾರಿಗಳಾದ ಅಕ್ರಮ್, ಲೇಪಾಕ್ಷಿ, ಸುಬೇದಾರರಾದ ಸತ್ಪಾಲ್ ಮತ್ತು ಎನ್.ಸಿ.ಸಿ. ಘಟಕದ 50 ಕೆಡೆಟ್‍ಗಳು ಪಾಲ್ಗೊಂಡಿದ್ದರು.