ಮಡಿಕೇರಿ, ಆ. 2: ಕರ್ನಾಟಕ ಪ್ರಾದೇಶಿಕ ವಿಭಾಗದ 106ನೇ ಬ್ರೈನೋಬ್ರೈನ್ ಅಬಾಕಸ್ ಸ್ಪರ್ಧೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಿತು. ಕೊಡಗು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1300 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಪದಕ ವಿಜೇತ ಡಾ. ರಾಜ್‍ದೀಪ್ ಮನ್ವಾನಿ ಮುಖ್ಯ ಅತಿಥಿಗಳಾಗಿದ್ದರು.
ಮಡಿಕೇರಿ ಕೇಂದ್ರದಿಂದ 39 ವಿದ್ಯಾರ್ಥಿಗಳು ಭಾಗವಹಿಸಿದ್ದು, 6 ಚಾಂಪಿಯನ್ ಟ್ರೋಫಿ, 14 ಚಿನ್ನದ ಪದಕ ಹಾಗೂ 14 ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಡಿಕೇರಿ ಕೇಂದ್ರಕ್ಕೆ ಅತ್ಯುತ್ತಮ ಫ್ರಾಂಚೈಸಿ ಹಾಗೂ ಶಿಕ್ಷಕಿ ಮಾಪಂಗಡ ಕವಿತಾ ಕರುಂಬಯ್ಯ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಮಡಿಕೇರಿ ಕೇಂದ್ರಕ್ಕೆ ‘ಗ್ರೋತ್ ಅಂಡ್ ಎಕ್ಸಲೆನ್ಸ್ ಅವಾರ್ಡ್’ ಕೂಡ ಲಭಿಸಿದೆ.
ಚಾಂಪಿಯನ್ ಟ್ರೋಫಿಯನ್ನು ಜನನಿ ಎಂ.ಎನ್., ಕಾರ್ತಿಕ್ ಕೆ.ಪಿ., ದೃತಿ ರಿಷಿಕ ಬಿ.ಎಸ್., ಯಶಸ್ ಕೆ.ಜಿ., ಮಾನವಿ ಬಿ.ಎಂ. ಮತ್ತು ರುಚಿ ಕೆ.ಎ. ತಮ್ಮದಾಗಿಸಿಕೊಂಡಿದ್ದಾರೆ.