*ಗೋಣಿಕೊಪ್ಪಲು ಆ.2: ಇಲ್ಲಿನ ಬಸ್ ನಿಲ್ದಾಣದ ಬಳಿ 2 ದಿನಗಳ ಹಿಂದೆ ಅಂದಾಜು 50 ವರ್ಷ ಪ್ರಾಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲಿರುವ ವರಲಕ್ಷ್ಮಿ ಬೇಕರಿ ಪಕ್ಕದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, 5.4 ಅಡಿ ಎತ್ತರವಿದ್ದು ಕಪ್ಪು ಬಣ್ಣ, ತಲೆ ಕೂದಲು ಒಂದು ಇಂಚು ಉದ್ದವಿದೆ.
ಮೈ ಮೇಲೆ ಬಿಳಿಗೆರೆ ಹಾಗೂ ಬೂದು ಬಣ್ಣದ ಅರ್ಧ ತೋಳಿನ ಅಂಗಿ ಹಾಗೂ ಪ್ಯಾಂಟ್ ಧರಿಸಲಾಗಿದೆ. ವ್ಯಕ್ತಿಯ ವಾರಸು ದಾರರು ಇದ್ದಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣೆ ನಂ.08274-247333, 247209ರಲ್ಲಿ ಸಂಪರ್ಕಿಸಬೇಕು ಎಂದು ಎಸ್‍ಐ ಶ್ರೀಧರ್ ತಿಳಿಸಿದ್ದಾರೆ.