ಮಡಿಕೇರಿ, ಆ. 2: ಮಡಿಕೇರಿಯ ಲಿಟ್ಲ್ ಫ್ಲವರ್ ವಿದ್ಯಾ ಸಂಸ್ಥೆಯಲ್ಲಿ ‘ಬ್ಯಾಗ್ ರಹಿತ ದಿನ’ವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಭರತನಾಟ್ಯ ಕಲಾವಿದೆಯರಾದ ಡಾ. ಶ್ರೀವಿದ್ಯಾ ಮುರುಳೀಧರ್ ಮತ್ತು ಶ್ರೀಧನ್ಯಾರಾಮನ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಾ. ಶ್ರೀವಿದ್ಯಾ ಮುರುಳೀಧರ್ ಮಾತನಾಡಿ, ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಮತ್ತೋರ್ವ ಅತಿಥಿಯಾದ ಶ್ರೀಧನ್ಯಾರಾಮನ್ ಜರ್ಮನಿ ಶಿಕ್ಷಣದ ಕುರಿತು ಮಾತನಾಡಿ, ಜರ್ಮನಿಯಲ್ಲಿ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಒತ್ತನ್ನು ಕೊಡುತ್ತಾರೆ. ಹಾಗೆಯೇ ನಮ್ಮಲ್ಲಿಯೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಪಾಲ್ಗೊಳ್ಳ ಬೇಕೆಂದು ಸಲಹೆ ನೀಡಿದರು.
ಶಾಲೆಯ ಮಕ್ಕಳು ಕಣ್ಣಿನ ಬಗ್ಗೆ ಗಣಕಯಂತ್ರದ ಬಗ್ಗೆ, ಪ್ರಾಣಿಗಳ ಬಗ್ಗೆ, ಕ್ರೀಡೆ ಬಗ್ಗೆ ಮತ್ತು ರಾಷ್ಟ್ರೀಯ ಲಾಂಛನದ ಬಗ್ಗೆ ತಿಳಿಸಿಕೊಟ್ಟರು.