ಗೋಣಿಕೊಪ್ಪ ವರದಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಮ್ಮಲೆಯಲ್ಲಿ 23 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಸಿ.ಎಂ. ಪಾರ್ವತಿ ಅವರನ್ನು ಟಿ. ಶೆಟ್ಟಿಗೇರಿ ಕ್ಲಸ್ಟರ್ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಕ್ಲಸ್ಟರ್‍ಗೆ ಒಳಪಡುವ 15 ಶಾಲೆಗಳ ಶಿಕ್ಷಕ ವೃಂದ ಪಾಲ್ಗೊಂಡು ಶುಭ ಕೋರಿದರು. ಶಾಲೆ ಮುಖ್ಯ ಶಿಕ್ಷಕಿ ಪದ್ಮಾವತಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್‍ಕುಮಾರ್, ಕ್ಲಸ್ಟರ್ ಶಿಕ್ಷಕಿ ಟಿ.ಕೆ. ವಾಮನ, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್, ಶಿಕ್ಷಕರಾದ ಎಂ.ಪಿ. ಸತ್ಯ, ನಳಿನಿ, ಮಹೇಶ್ ಉಪಸ್ಥಿತರಿದ್ದರು.