ಕುಶಾಲನಗರ, ಆ. 2: ಹೆದ್ದಾರಿ ಬದಿಯಲ್ಲಿ ನೆಟ್ಟು ಬೆಳೆಸಿದ ಅಪ ರೂಪದ ಗಿಡ ವೊಂದನ್ನು ಕಡಿದು ನಾಶಗೊಳಿಸಿದ ವ್ಯಕ್ತಿಯೊಬ್ಬನ ದುಷ್ಕøತ್ಯ ಖಂಡಿಸಿ ಇಲ್ಲಿಗೆ ಸಮೀಪದ ಕೊಪ್ಪ ಗ್ರಾಮದಲ್ಲಿ ಪರಿಸರ ಪ್ರೇಮಿಗಳು ವಿನೂತನ ರೀತಿಯ ಪ್ರತಿಭಟನೆ ಸಲ್ಲಿಸಿದ ಪ್ರಕರಣ ಗೋಚರಿಸಿದೆ. ಕೊಪ್ಪ ಸರಕಾರಿ ಆಸ್ಪತ್ರೆ ಮುಂಭಾಗ ಹೆದ್ದಾರಿ ಬದಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಬೇವಿನ ಮರವೊಂದರ ಎಲ್ಲಾ ಕೊಂಬೆಗಳನ್ನು ಕತ್ತರಿಸಿ ಹಾನಿಗೊಳಿಸಿದ ಈ ಕೃತ್ಯವನ್ನು ವಿರೋಧಿಸಿ ಪರಿಸರದ ಬಗ್ಗೆ ಅರಿವಿನ ಫಲಕವೊಂದನ್ನು ಅಳವಡಿಸಿರುವದು ಕಂಡುಬಂದಿದೆ.

‘ನನ್ನನ್ನು ಕಡಿದು ಈ ಸ್ಥಿತಿಗೆ ಕಾರಣರಾದ ನಿಮಗೆ ಸಧ್ಯದಲ್ಲಿಯೇ ನನ್ನ ಮೌಲ್ಯದ ಬಗ್ಗೆ ಅರ್ಥವಾಗಲಿದೆ. ಗಿಡ ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಿಸಿ-ನೊಂದ ಬೇವಿನ ಮರ’ ಎಂಬ ಫಲಕ ಮರದಲ್ಲಿ ನೇತಾಡುತ್ತಿರುವದು ಕಾಣಬಹುದು.

- ಸಿಂಚು