ಕೂಡಿಗೆ, ಆ. 1: ಕೂಡಿಗೆ ವಲಯಮಟ್ಟದ ಕ್ರೀಡಾ ಕೂಟ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಕೂಡಿಗೆಯ ಮುರಾರ್ಜಿ ಅಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲೆ ಪ್ರಾಂಶುಪಾಲ ಪ್ರಕಾಶ ವಹಿಸಿದ್ದರು. ಸಭೆಯಲ್ಲಿ ಈ ವ್ಯಾಪ್ತಿಯ ಎಂಟು ಪ್ರಾಥಮಿಕ ಮತ್ತು ಪ್ರೌಢಶಾಲಾ ದೃಹಿಕ ಶಿಕ್ಷಕರು ಭಾಗವಹಿಸಿದರು. ಮುಂದಿನ ತಿಂಗಳ ಎರಡನೆಯ ವಾರದಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭ ದೈಹಿಕ ಶಿಕ್ಷಕರಾದ ಪ್ರತಾಪ್, ಪ್ರವೀಣ್, ದೊಡ್ಡಯ್ಯ, ಬೋಜೇಗೌಡ, ಮುತ್ತಪ್ಪ, ದಿನೇಶಚಾರಿ. ಮೊದಲಾದವರು ಇದ್ದರು.