ಮಡಿಕೇರಿ, ಆ. 2: ನಾಪೆÇೀಕ್ಲು ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್ ಮತ್ತು ನಾಪೆÇೀಕ್ಲು ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ತಾ. 3 ರಂದು ಆಯೋಜಿಸಿದ್ದ ಕಕ್ಕಡ 18 ತೀನಿ ನಮ್ಮೆ-ಪೈಪೆÇೀಟಿ ಮತ್ತು ಪ್ರದರ್ಶನ ನಿಗದಿಯಂತೆ ನಡೆಯಲಿದೆ ಎಂದು ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನುಮುತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಕೊಡವ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರ ನಾಮನಿದೇರ್ಶನವನ್ನು ರದ್ದು ಪಡಿಸಿರುವದರಿಂದ ತಾ. 3 ರಂದು ನಾಪೋಕ್ಲು ಕೊಡವ ಸಮಾಜದಲ್ಲಿ ಕಕ್ಕಡ 18 ನಮ್ಮೆ ರದ್ದಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನಾಪೆÇೀಕ್ಲು ಕೊಡವ ಸಮಾಜದ ಪೆÇಮ್ಮಕ್ಕಡ ಪರಿಷತ್ ಮತ್ತು ನಾಪೆÇೀಕ್ಲು ಕೊಡವ ಸಮಾಜದ ವತಿಯಿಂದ ಕಾರ್ಯಕ್ರಮವನ್ನು ನಿಗದಿಯಂತೆ ನಡೆಸಲು ನಿರ್ಧರಿಸಿದ್ದು, ನಾಪೆÇೀಕ್ಲು ಕೊಡವ ಸಮಾಜದಲ್ಲಿ ಬೆಳಗ್ಗೆ 10 ಗಂಟೆಗೆ ಕಕ್ಕಡ 18 ರ ಸಂಭ್ರಮ ಮೇಳೈಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಡವ ಅಭಿಮಾನಿಗಳು ಹಾಗೂ ಪೈಪೋಟಿಯಲ್ಲಿ ಪಾಲ್ಗೊಳ್ಳುವವರು ಯಾವದೇ ಗೊಂದಲಕ್ಕೆ ಸಿಲುಕದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮೆಯನ್ನು ಯಶಸ್ವಿಗೊಳಿಸುವಂತೆ ಮನುಮುತ್ತಪ್ಪ ಮನವಿ ಮಾಡಿದ್ದಾರೆ.