ಮಡಿಕೇರಿ, ಆ. 2: ಪ್ರಾರ್ಥನೆ ನಮ್ಮ ಅಂತಃಕರಣವನ್ನು ಅರಿಯಲು ಉತ್ತಮ ಮಾಧ್ಯಮವೆಂದು ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಾಯಕ, ನಾಯಕಿಯರ ಪದಗ್ರಹಣ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಹೇಳಿದ್ದಾರೆ.

ವಿದ್ಯಾರ್ಥಿ ನಾಯಕ- ನಾಯಕಿ ಯರಿಗೆ ಶುಭ ಕೋರುತ್ತಾ ಗ್ಯಾಜೆಟ್‍ಗಳ ಬಳಕೆಯನ್ನು ವಿದ್ಯಾರ್ಥಿ ಗಳು ಕಡಿಮೆ ಮಾಡಬೇಕೆಂದು ಹೇಳಿದರು. ಮಾಧಕ ವಸ್ತುಗಳು ಜೀವನವನ್ನು ಹಾಳು ಮಾಡುತ್ತದೆ. ಅದರ ಬಗ್ಗೆ ಗಮನ ಕೊಡಬಾರದೆಂದು ವಿದ್ಯಾರ್ಥಿಗಳಿಗೆ ಕರೆ ನೀಡುತ್ತಾ, ಓದಿನ ಬಗ್ಗೆ ಆಸಕ್ತಿ ವಹಿಸಬೇಕೆಂದು, ಐ.ಎ.ಎಸ್.ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ವಹಿಸುವಂತೆ ಕಿವಿಮಾತು ಹೇಳಿದರು.

ಅಧ್ಯಕ್ಷ ಭಾಷಣ ಮಾಡಿದ ಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿಯವರು ಮಾದರಿ ವಿದ್ಯಾರ್ಥಿಗಳಾಗುವಂತೆ ಕರೆ ನೀಡಿದರು.

ಸಂಸ್ಥೆಯ ನಿರ್ದೇಶಕ ಅರಮಣಮಾಡ ಸತೀಶ್ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಿ ಎಂದು ಹೇಳುತ್ತಾ, ಭವ್ಯ ಸಮಾಜದ ನಿರ್ಮಾಣದ ಗುರಿ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿ.ಎಡ್. - ಡಿ.ಎಡ್. ಪ್ರಾಂಶುಪಾಲ ನಾರಾಯಣ್, ಕಾಲೇಜು ವಿಭಾಗದ ಪ್ರಾಂಶುಪಾಲೆ ಬೊಟ್ಟಂಗಡ ದಶಮಿ, ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ರಮ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಬ್ಯಾಡ್ಜ್‍ಗಳನ್ನು ನೀಡಿ, ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿದ್ಯಾರ್ಥಿನಿ ಸೋನು ಗಣಪತಿ ಸ್ವಾಗತಿಸಿದರೆ. ಉಪನ್ಯಾಸಕಿ ನಸೀಬಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕ - ನಾಯಕಿಯರು ತಮ್ಮ ಅನಿಸಿಕೆ ತಿಳಿಸಿದರೆ ವಿದ್ಯಾರ್ಥಿನಿ ಶೈನಿ ಮುತ್ತಮ್ಮ ವಂದಿಸಿದರು.