ಸೋಮವಾರಪೇಟೆ,ಆ.2: ಇಲ್ಲಿನ ಜ್ಞಾನ ವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಮತ್ತು ವನಮಹೋತ್ಸವದ ಕಾರ್ಯಕ್ರಮ ನಡೆಯಿತು. ನಿವೃತ್ತ ಸೈನಿಕರಾದ ಮೇಜರ್ ಮಂದಪ್ಪ, ಎಂ.ಪಿ. ಪೂವಯ್ಯ, ಎಂ.ಇ. ಮಹೇಶ್ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಣವಟ್ಟಿರ ಹರೀಶ್ ಮತ್ತು ಪದಾಧಿಕಾರಿಗಳು, ಜ್ಞಾನವಿಕಾಸ ಶಾಲಾಭಿವೃದ್ಧಿ ಸಮಿತಿಯ ಮಹೇಶ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.