ಮಡಿಕೇರಿ, ಆ. 2: ಕಾಫಿ ಉದ್ಯಮಿ ಎ.ಬಿ. ಸಿದ್ಧಾರ್ಥ ಅವರ ಅಕಾಲಿಕ ಸಾವಿನ ಬಗ್ಗೆ ವೀರಾಜಪೇಟೆ ಮಾಜಿ ಸೈನಿಕರ ಸಂಘ ಹಾಗೂ ಅಮ್ಮತ್ತಿ ರೈತ ಸಂಘದ ಮೂಲಕ ತಾ. 3 ರಂದು (ಇಂದು) ಬೆ. 10.30ಕ್ಕೆ ವೀರಾಜಪೇಟೆ ಗಡಿಯಾರಕಂಬದ ಬಳಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಫಿ ಬೆಲೆ ಏರಿಕೆ ಕಾಣಲು ಸಿದ್ಧಾರ್ಥ ಅವರ ಕೊಡುಗೆಯೂ ಇದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ಮಾಜಿ ಸೈನಿಕರ ಸಂಘದ ಚಪ್ಪಂಡ ಹರೀಶ್ ತಿಳಿಸಿದ್ದಾರೆ.