ಸಿದ್ದಾಪುರ, ಆ. 2 : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನೆಲ್ಯಹುದಿಕೇರಿ ಆಟೋ ಚಾಲಕನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ನೆಲ್ಯಹುದಿಕೇರಿಯ ಎಂ. ಜಿ. ಕಾಲೋನಿ ನಿವಾಸಿ ನೆಲ್ಯಹುದಿಕೇರಿಯಲ್ಲಿ ಆಟೋ ಚಾಲಕನಾಗಿರುವ ಮುಸ್ತಫಾ ಎಂಬಾತ 7 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಗೆ ತನ್ನ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರಕುಳ ನೀಡುತಿದ್ದ ಎನ್ನಲಾಗಿದೆ. ಅಲ್ಲದೆ ಈತ ನಿರಂತರವಾಗಿ ಅಪ್ರಾಪ್ತ ಶಾಲಾ ಮಕ್ಕಳಿಗೂ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆಯ ಪೋಷಕರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಆಟೋ ಚಾಲಕ ಮುಸ್ತಫಾ ತಲೆ ಮರೆಸಿಕೊಂಡಿದ್ದು ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.