ಮಡಿಕೇರಿ, ಆ. 2: ಹಳೆಯ ವಿದ್ಯಾರ್ಥಿಗಳ ಸಾಧನೆಗಳ ಬಗೆಗೆ ವಿವರಗಳನ್ನು ಸಂಗ್ರಹಿಸಿ ಶಾಲೆಯ ಮುಂಬರುವ ಪೀಳಿಗೆಗೆ ಸ್ಫ್ಪೂರ್ತಿ ಯನ್ನು ನೀಡುವದು ಮತ್ತು ದೇಶ ವಿದೇಶಗಳಲ್ಲಿ ಹೆಸರಾಂತ ಕೈಗಾರಿಕೆಗಳಲ್ಲಿ, ಐಟಿ ಸಂಸ್ಥೆಗಳಲ್ಲ್ಲಿ ಕೆಲಸದಲ್ಲಿರುವ ಹಿರಿಯ ವಿದ್ಯಾರ್ಥಿ ಗಳಿಂದ ಬೇರೆ ಹಳೆ ವಿದ್ಯಾರ್ಥಿ ಗಳಿಗೆ ಉದ್ಯೋಗಾವಕಾಶ ಗಳ ಬಗ್ಗೆ ಮಾರ್ಗದರ್ಶನ ಮತ್ತು ಪ್ರಸ್ತುತ ಶಾಲೆಯ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಹಾಗೂ ವೃತ್ತಿ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಹಳೆ ವಿದ್ಯಾರ್ಥಿ ಸಂಘ ಪ್ರಾರಂಭಿಸುತ್ತಿರುವದಾಗಿ ಗೋಣಿಕೊಪ್ಪಲಿನ ಸಂತ ಥಾಮಸ್ ಶಾಲೆಯ ಪ್ರಾಂಶುಪಾಲ ರೆ. ಫಾ. ಜಾರ್ಜ್ ನುಡಿದರು.
ಹಳೆ ವಿದ್ಯಾರ್ಥಿಗಳ ಸಂಘ ರಚನೆಗಾಗಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
1969ರಲ್ಲಿ ಪ್ರಾರಂಭಗೊಂಡ ಗೋಣಿಕೊಪ್ಪಲಿನ ಸಂತ ಥಾಮಸ್ ಶಾಲೆ 2019-20ರ ವರ್ಷದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುತಿದ್ದು ಇದರ ಸವಿ ನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಲ್ಲಿಯವರೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆದಿದ್ದು ಅವರೆಲ್ಲರನ್ನು ಒಂದೆಡೆ ಸೇರಿಸಿ ಹಳೆ ವಿದ್ಯಾರ್ಥಿಗಳ ಸಂಘ ರಚನೆಗಾಗಿ ಪೂರ್ವಭಾವಿ ಸಭೆ ನಡೆಯಿತು.
60ಕ್ಕೂ ಹೆಚ್ಚಿನ ಹಳೆ ವಿದ್ಯಾರ್ಥಿಗಳು ಸಭೆ ಸೇರಿದ್ದು ತಮ್ಮ ಶಾಲೆಯ ನೆನಪುಗಳನ್ನು ಮೆಲಕು ಹಾಕಿ ಕೊಳ್ಳುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.
ಸಭೆಗೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ಉತ್ಸಾಹದಿಂದ ಚರ್ಚಿಸಿ ಮುಂಬರುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಹಳೆ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳುವಂತೆ ತಮ್ಮ ಸ್ನೇಹಿತರನ್ನು ಈ ಸಂಘಕ್ಕೆ ಸೇರಿಸಿಕೊಂಡು ವಿಜೃಂಭಣೆ ಯಿಂದ ಸುವರ್ಣ ಮಹೋತ್ಸವ ಆಚರಿಸುವಂತೆ ತೀರ್ಮಾನಿಸಲಾ ಯಿತು. ಒಂದು ಪ್ರಾರಂಭಿಕ ಸಮಿತಿ ಯನ್ನು ರಚಿಸುವಂತೆಯೂ ತೀರ್ಮಾನಿಸಿ ಸಂಚಾಲಕರಾಗಿ ಮನೆಯಪಂಡ ಮಾಚಯ್ಯ ಮತ್ತು ಕುಲ್ಲಚಂಡ ಗಣಪತಿ ಅವರನ್ನು, ಚಂದನ್ ಕಾಮತ್ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಎನ್.ಕೆ. ಜ್ಯೋತಿ, ಪಿ.ಜಿ. ರಾಜಶೇಖರ್, ಪಿ.ಕೆ. ಪ್ರವೀಣ್, ಡಾಡು ಜೋಸೆಫ್, ಅವಿನಾಶ್ ಬಿ.ವಿ, ಶರತ್ ಕಾಂತ್, ಜೊಸ್ನಾ ಜೋಸೆಫ್, ಶಶಾಂಕ್ ಆರ್, ಐವಿನ್ ಎಂ ಥಾಮಸ್, ನವನೀತ್ ಎಂ.ಪಿ, ಸುಭಾಶ್ ಮ್ಯಾಥ್ಯು, ಸಪ್ನಾ ಭರತ್ ಸೇರಿದಂತೆ 16 ವಿದ್ಯಾರ್ಥಿಗಳ ಅಡಹಕ್ ಸಮಿತಿ ರಚಿಸಲಾಯಿತು
ಈ ಸಂದರ್ಭ ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರಾದ ಪಿ.ಜಿ. ರಾಜಶೇಖರ್, ಕುಲ್ಲಚಂಡ ಗಣಪತಿ, ಕಾಫಿ ಬೆಳೆಗಾರರಾದ ಮನೆಯಪಂಡ ಮಾಚಯ್ಯ, ಹಿಂದೂ ಮಲೆಯಾಳಿ ಸಂಘದ ಅಧ್ಯಕ್ಷ ಶರತ್ ಕಾಂತ್, ಪಿ.ಕೆ. ಪ್ರವೀಣ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಿಲ್ಸನ್ ಮಾಯಮುಡಿ, ಕೇಶವ ಕಾಮತ್, ಅಬ್ದುಲ್ ಸಮ್ಮದ್ ಮಾತನಾಡಿದರು. ಎ.ಜೆ. ಬಾಬು ಸ್ವಾಗತಿಸಿ. ಪ್ರಭಾವತಿ ವಂದಿಸಿದರು.