ವೀರಾಜಪೇಟೆ, ಆ. 2: ವೀರಾಜಪೇಟೆಯಲ್ಲಿ ಮಲೆತಿರಿಕೆ ಈಶ್ವರ ಕೊಡವ ಸಂಘವನ್ನು ನೂತನವಾಗಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ, ಉಪಾಧ್ಯಕ್ಷರಾಗಿ ಮೇಕೇರಿರ ಪಾಲಿ ಸುಬ್ರಮಣಿ, ಕಾರ್ಯದರ್ಶಿಯಾಗಿ ಮಾದೆಯಂಡ ಹ್ಯಾರಿ ಅಚ್ಚಯ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಪುಗ್ಗೇರ ಶಶಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರುಗಳಾಗಿ ಅಯ್ಯಮಂಡ ದೇಚಮ್ಮ, ಪಟ್ಟಡ ಸ್ವಪ್ನ ಪೂಣಚ್ಚ, ಬೇಪಡಿಯಂಡ ಆನಂದ್ ಉತ್ತಪ್ಪ, ಪಾಲೇಂಗಡ ಮೋಹನ್ ಉತ್ತಪ್ಪ, ಕುಂಡ್ರಂಡ ಶಿಲ್ಪ ಪೊನ್ನಪ್ಪ, ಕೂತಂಡ ಸಚಿನ್, ಮಂದೆಯಂಡ ದಿನೇಶ್, ಪರಂದಂಡ ಸುಮ್ಮಿ ಬೋಪಣ್ಣ ಹಾಗೂ ಪಂದ್ಯಂಡ ಮೀನಾ ಉತ್ತಪ್ಪ ಆಯ್ಕೆಯಾಗಿದ್ದಾರೆ.