ಕೂಡಿಗೆ, ಆ. 1: ಕೂಡ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್.ಡಿ.ಆರ್.ಎಫ್) ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪ್ರಕೃತಿ ವಿಕೋಪದ ಕುರಿತು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಎನ್.ಡಿ.ಆರ್.ಎಫ್. ತಂಡದ ಕಮಾಂಡರ್ ರಮೇಶ್ ನೇತೃತ್ವದ ತಂಡವು ಹಾರಂಗಿ ಅಣೆಕಟ್ಟೆಯನ್ನು ಪರಿಶೀಲಿಸಿತು. ಈ ಸಂದರ್ಭ ಎನ್.ಡಿ. ಆರ್.ಎಫ್ ತಂಡದ ಯೋಧರು, ಕಂದಾಯ ಇಲಾಖೆಯ ಮಧು ಸೂದನ್, ಗ್ರಾಮ ಲೆಕ್ಕಿಗ ಗೌತಮ್, ಕುಶಾಲನಗರ ಪಟ್ಟಣ ಪಂಚಾಯ್ತಿಯ ಪ್ರಥಮ ದರ್ಜೆ ನೌಕರ ಸತೀಶ್, ಆರೋಗ್ಯಾಧಿಕಾರಿ ಸೇರಿದಂತೆ, ಪೊಲೀಸ್ ಸಿಬ್ಬಂದಿ ಇದ್ದರು.