*ಗೋಣಿಕೊಪ್ಪಲು, ಆ. 2: ಮೆದುಳಿನ ಔಷಧಿ ಆಧ್ಯಾತ್ಮವಾಗಿದ್ದು; ಅದನ್ನು ಅರಗಿಸಿಕೊಂಡರೆ ಶಕ್ತಿಶಾಲಿ ಬದುಕು ರೂಪಿಸಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ವಸತಿ ಶಾಲೆಯ ಮುಖ್ಯಸ್ಥರಾಗಿರುವ ಯುಕ್ತೇಶ್ವರನಂದ ಮಹಾರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪೆÇನ್ನಂಪೇಟೆ ಶ್ರೀ. ರಾಮಕೃಷ್ಣ ಶಾರದಾಶ್ರಮದಲ್ಲಿ; 125ನೇ ವರ್ಷದ ಚಿಕಾಗೋ ಸರ್ವ ಧರ್ಮ ಸಮ್ಮೇಳನದ ಅಂಗವಾಗಿ ಸ್ವಾಮಿ ಜಗನಾತ್ಮನಂದಾಜೀ ಅವರ ನೆನಪಿನಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ವಿದ್ಯಾರ್ಥಿ ಗಳಿಗೆ ಆಧ್ಯಾತ್ಮದ ಬಗ್ಗೆ ಬೋಧಿಸಿದರು. ನಾವು ಆಲೋಚಿಸುವ ವಿಚಾರಗಳೇ ಜೀವನವನ್ನು ರೂಪಿಸುತ್ತದೆ. ಪ್ರತಿಯೊಬ್ಬರು ಜ್ಞಾನದ ಬೆಳಕಿನ ಕಡೆ ಸಾಗುತ್ತಾ ಹೊಸತನಕ್ಕೆ ಮನಮಿಡಿಯುತ್ತಿರಬೇಕು. ಪಠ್ಯ ಓದುವಿನೊಂದಿಗೆ ಇತರ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿರಬೇಕು. ಮನಸ್ಸು ಸದಾ ಹೊಸ ಜೀವನದ ಬೆಳಕಿನೆಡೆಗೆ ಸಾಗಲು ಹಂಬಲಿಸಬೇಕು. ಕೆಲಸದ ಬಗ್ಗೆ ಶ್ರದ್ಧೆ ಮತ್ತು ಗುರಿಮುಟ್ಟುವ ಛಲ ಹೊಂದಿರಬೇಕು. ದೇಹ ಸೌಂದರ್ಯದ ಬಗ್ಗೆ ಮೋಹ ಹೊಂದದೆ, ಮನಸ್ಸಿನ ಸೌಂದರ್ಯದ ಕಡೆ ಗಮನ ಹರಿಸಬೇಕು. ಅದಕ್ಕೆ ಉತ್ತಮ ಚಿಂತನೆಗಳು ಧ್ಯಾನ, ಯೋಗಗಳು ಅಗತ್ಯ ಎಂದು ಅವರು ಕಿವಿ ಮಾತು ಹೇಳಿದರು. ಮೈಸೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಮುಕ್ತ್ತಿದಾನಂದಾ ಮಹಾರಾಜ್ ಮಾತನಾಡಿ; ಆಧ್ಯಾತ್ಮಿಕ ಜ್ಞಾನದಿಂದ ಯುವ ಸಮುದಾಯದ ಮನಸ್ಸನ್ನು ಪರಿವರ್ತಿಸಲು ಸಾಧ್ಯ. ನಾವು ತೊಡುವ ಉಡುಪುಗಳೇ ನಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ದೇಶದ ದಾರಿದ್ರ್ಯವೆಂದರೆ ಇಂದಿನ ಯುವಕರ ಮನದಲ್ಲಿರುವ ಅಂಧ ವಿಶ್ವಾಸ ಭಾವವಾಗಿದೆ. ಯುವ ಶಕ್ತಿ ಜಾಗೃತವಾದರೆ ದೇಶವು ಸದೃಡವಾಗಲಿದೆ. ನಿಧಾನವಾಗಿ ಭಾರತದ ಕಡೆ ವಿದೇಶಿಗರು ದೃಷ್ಠಿ ಹಾಯಿಸಿದ್ದಾರೆ. ಯೋಗ ಆಯುರ್ವೇದದ ಮಹತ್ವ ವಿದೇಶಿಗರಿಗೆ ಅರಿವಾಗುತ್ತಿದ್ದರೂ, ಸ್ವದೇಶಿಯರು ಈ ಬಗ್ಗೆ ನಿರ್ಲಕ್ಷ್ಯ ಹೊಂದುತ್ತಿರುವದು ವಿಪರ್ಯಾಸ ಎಂದರು.

(ಮೊದಲ ಪುಟದಿಂದ) ಆತ್ಮಶೃದ್ಧೆ ಇಲ್ಲದೆ ಇಂದಿನ ಯುವ ಸಮೂಹ ಹೆಚ್ಚಾಗಿ ಸಾಧನೆಯ ಹೊರತಾಗಿಯೂ ಮನಸ್ಸಿನ ತಳಮಳಕ್ಕೊಳಗಾಗಿ ಬದುಕು ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸ್ವಾಮಿ ವಿವೇಕಾನಂದರು ಎಲ್ಲವನ್ನೂ ಎದುರಿಸಿ ಆತ್ಮಶೃದ್ಧೆಯಿಂದ ಮಾಡಿದ ಭಾಷಣ ಇಂದಿಗೂ ನೆನೆಪಿಸಿಕೊಳ್ಳು ವಂತಿದೆ. ಇದರಂತೆ ನಾವು ವಿವೇಕಾ ನಂದರ ಆತ್ಮಚರಿತ್ರೆ ಅವಲೋಕನ ಮಾಡಿಕೊಳ್ಳುವ ಮೂಲಕ ಬದುಕು ನಿಭಾಯಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ವಿವೇಕಾನಂದರ ತತ್ವಗಳು ಪರಿಣಾಮಕಾರಿಯಾಗಿದೆ ಮತ್ತು ಪರಿವರ್ತನಾಕಾರಿಯಾಗಿದೆ. ಯುವಜನತೆಯನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಲು ತತ್ವಗಳು ಸಹಾಯಕವಾಗಿದೆ. ಸದ್ಗುನಸಂಪನ್ನತೆ ಎಲ್ಲಾ ಐಶ್ವರ್ಯ ಗಳಿಗಿಂತ ಮೇಲು ಇದರಿಂದ ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಬಹುದು. ವಿವೇಕಾನಂದರ ಆತ್ಮಚರಿತ್ರೆಯಲ್ಲಿನ ವಿಶೇಷತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ವಿವೇಕಾನಂದರು ವಿದೇಶದಲ್ಲಿ ಮಾಡಿದ ಭಾಷಣವನ್ನು ಇಂದಿಗೂ ನೆನೆಪಿಸಿಕೊಳ್ಳಬೇಕೆಂದರೆ ಅವರಲ್ಲಿ ಆಂತರಿಕ ಶಕ್ತಿ ಹೆಚ್ಚು ಗಮನ ಸೆಳೆದಿದೆ. ಅವರು ವ್ಯಕ್ತಪಡಿಸಿದ ರೀತಿ ವಿಶೇಷವಾಗಿತ್ತು. ಹಿಂದೂ ಸಂಸ್ಕøತಿಯ ಅರಿವು ಕೂಡ ಅವರ ಭಾಷಣದಿಂದ ಪ್ರಪಂಚಕ್ಕೆ ಅರಿವಾಗಿದೆ. ಸಾಮಾನ್ಯವಾಗಿ ಜನರಲ್ಲಿ ಹೆಚ್ಚಿನ ಶಕ್ತಿ ಇದ್ದರೂ ಕೂಡ ಸಬೂಬು ಹೇಳುವದರಿಂದಲೇ ಸಾಮಾನ್ಯವಾಗಿ ಸಾಧನೆಯಿಂದ ವಂಚಿತರಾಗುತ್ತಿದ್ದಾರೆ. ಶೃದ್ಧೆಯಿಂದ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಅವರಲ್ಲಿನ ಆತ್ಮಶೃದ್ಧೆ ಅವರಲ್ಲಿನ ಶಕ್ತಿಯನ್ನು ಹೊರಸೂಸುವಂತೆ ಮಾಡಿತ್ತು. ಇಂತಹವರ ಆತ್ಮಚರಿತ್ರೆ ನಮ್ಮನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲಿದೆ. ಇಂತಹವರನ್ನು ನಾವು ಸ್ಪೂರ್ತಿಯಾಗಿಟ್ಟುಕೊಂಡು ಮುನ್ನಡೆಯಬೇಕಿದೆ. ನಮ್ಮ ದೇಶ ಎಂಬ ಅಭಿಮಾನ ಹೆಚ್ಚಾಗಬೇಕಿದೆ ಎಂದರು. ಶೌರ್ಯಚಕ್ರ ಪುರಸ್ಕøತ ಎಚ್. ಎನ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಸ್ವದೇಶಿ ಮಂತ್ರ ಪಠನೆ ನಡೆಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪನಂದಾಜಿ, ಅಲಸೂರು ರಾಮಕೃಷ್ಣ ಮಠ ಸ್ವಾಮೀಜಿ ತತ್ವರೂಪನಂದಾ ಮಹರಾಜ್, ಮೈಸೂರು ರಾಮಕೃಷ್ಣ ವಿದ್ಯಾಶಾಲಾ ಪ್ರತಿನಿಧಿ ಯುಕ್ತೇಶನಂದಾಜಿ, ವಿವೇಕಾನಂದರ ಭಕ್ತ ಮಹಾದೇವಗೌಡ ಉಪಸ್ಥಿತರಿದ್ದರು.

ತನ್ನ ಬಗ್ಗೆ ಅರಿತುಕೊಳ್ಳಲು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು. ರಾಮಕೃಷ್ಣ, ವಿವೇಕಾನಂದರ ಜೀವನದ ಬಗ್ಗೆ ತಿಳಿದುಕೊಂಡು ಮಹಾತ್ಮರ ಸಂಪರ್ಕದಿಂದ ಮನಸ್ಸಿನ ಉನ್ನತಿಕರಣಕ್ಕೆ ಮುಂದಾಗಬೇಕು. ಸದಾ ಚಟುವಟಿಕೆಯಿಂದ ಇರಲು ಯೋಗ, ಧ್ಯಾನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪನಂದಾಜೀ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಯೋಧ ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ತತ್ವಸ್ವರೂಪನಂದಾಜೀ, ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಮಾದೇಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದನ್ ಕಾಮತ್ ಹಾಗೂ ಮಧುಸೂಧನ್ ನಾಯಕ್ ನಿರೂಪಿಸಿದರು.

-ಚಿತ್ರವರದಿ : ಸುದ್ದಿಪುತ್ರ, ಎನ್.ಎನ್. ದಿನೇಶ್