ಸುಂಟಿಕೊಪ್ಪ, ಜು. 31: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರಿಗೆ ಡೆಂಗ್ಯೂ ಜ್ವರ ಇರುವದು ಪತ್ತೆಯಾಗಿದ್ದು, 4 ರೋಗಿಗಳಲ್ಲಿ ಡೆಂಗ್ಯೂ ರೋಗದ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಇಲಾಖೆಯಿಂದ ಲಾವ್ರಾ ಸರ್ವೆ ನಡೆಸಲಾಗಿದೆ ಗ್ರಾಮ ಪಂಚಾಯಿತಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ ಎಂದು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ತಿಳಿಸಿದರು. ಸುಂಟಿಕೊಪ್ಪ 2ನೇ ವಾರ್ಡಿನ ಓರ್ವ ವ್ಯಕ್ತಿಗೆ ಡೆಂಗ್ಯೂ ಜ್ವರ ಪತ್ತೆಯಾಗಿದೆ. 1ನೇ ಹಾಗೂ 2ನೇ ವಾರ್ಡಿನ ಇತರ 4 ಮಂದಿಯಲ್ಲಿ ಡೆಂಗ್ಯೂ ಜ್ವರದ ಲಕ್ಷಣ ಕಂಡು ಬಂದರೂ ಅದು ದೃಢಪಟ್ಟಿಲ್ಲ. ಈ ಬಗ್ಗೆ ಸುಂಟಿಕೊಪ್ಪ ಆರೋಗ್ಯ ಕೇಂದ್ರದಿಂದ 6 ಮಂದಿ ಆಶಾ ಕಾರ್ಯಕರ್ತೆಯರು, 6 ಮಂದಿ ಆರೋಗ್ಯ ಸಹಾಯಕಿಯರು, ಆರೋಗ್ಯ ಪರಿವೀಕ್ಷಕರು 1ನೇ ಹಾಗೂ 2ನೇ ಸುಂಟಿಕೊಪ್ಪದಲ್ಲಿ ಡೆಂಗ್ಯೂ ಜ್ವರ ಪತ್ತೆ(ಮೊದಲ ಪುಟದಿಂದ) ವಾರ್ಡ್ ಮಧುರಮ್ಮ, ಉಲುಗುಲಿ 1ನೇ ವಾರ್ಡ್, 2ನೇ ವಾರ್ಡ್ ಬಡಾವಣೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೂ ಡೆಂಗ್ಯೂ ಜ್ವರ ಪ್ರಕರಣದ ಬಗ್ಗೆ ಪತ್ರ ಬರೆದು ಎಚ್ಚರವಹಿಸಲು ಸೂಚಿಸಲಾಗಿದೆ ಎಂದು ವಿವರಣೆ ನೀಡಿದರು. ಆದರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರಕರಣ ಪತ್ತೆಯಾಗಿದ್ದು, ಕೈಗೊಂಡಿರುವ ಕ್ರಮದ ಬಗ್ಗೆ ಗ್ರಾ.ಪಂ. ಪಿಡಿಓ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದಾಗ ಅಂತಹ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿಯೆ ಬಂದಿಲ್ಲ ಎಂದು ಉತ್ತರಿಸಿದ್ದಾರೆ!