ಸೋಮವಾರಪೇಟೆ: ರೋಟರಿ ಕ್ಲಬ್ ವತಿಯಿಂದ ಇಲ್ಲಿನ ಸಾಂದೀಪನಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದುದು. ವಿದ್ಯಾರ್ಥಿಗಳು ಸಮಯ, ಅವಕಾಶ ಸಿಕ್ಕಿದಾಗ ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್, ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರವಿ, ರೋಟರಿ ಪ್ರಮುಖರಾದ ಹೆಚ್.ಸಿ. ನಾಗೇಶ್, ನವೀನ್, ಪ್ರಕಾಶ್, ಲಿಖಿತ್, ದಿನೇಶ್, ಇಂದಿರಾ, ಮಲ್ಲೇಶ್, ಕುಮಾರ್, ಮುಖ್ಯ ಶಿಕ್ಷಕ ಮಾರ್ಷಲ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.ಬಾಡಗ: ವಿಶ್ವ ಪರಿಸರ ದಿನದ ಅಂಗವಾಗಿ ಬಾಡಗ ಲೇಡಿಸ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಕುಟ್ಟದ ಚೂರಿಕಾಡುವಿನಲ್ಲಿ ಸಸಿಗಳನ್ನು ನೆಡಲಾಯಿತು.

ಸಂಘದ ಅಧ್ಯಕ್ಷೆ ಶಾಲಿನಿ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲೀಲಾ ಕಾರ್ಯಪ್ಪ, ಕಾರ್ಯದರ್ಶಿ ಪುತ್ತಳಿ ಮುತ್ತಣ್ಣ, ಜಂಟಿ ಕಾರ್ಯದರ್ಶಿ ಗೀತಾ ತಿಮ್ಮಯ್ಯ, ಖಜಾಂಚಿ ಸಾಗಿ ಚಿಣ್ಣಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಸುಂಟಿಕೊಪ್ಪ: ಪರಿಸರದ ಬಗ್ಗೆ ಎಲ್ಲರೂ ಕಾಳಜಿ ತೋರುವದು ಅನಿವಾರ್ಯ ಎಂದು ನಮ್ಮ ಸುಂಟಿಕೊಪ್ಪ ಬಳಗದ ಮುಖ್ಯಸ್ಥ ಝಾಯ್ದ್ ಆಹ್ಮದ್ ಅಭಿಪ್ರಾಯಪಟ್ಟರು.

ನಮ್ಮ ಸುಂಟಿಕೊಪ್ಪ ಬಳಗದ ಮತ್ತು ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ಸಸಿಗಳನ್ನು ನೆಡುವದರ ಮೂಲಕ ವೃಕ್ಷ ಸಂಕುಲವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದ್ದೇವೆ. ಅದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಇದೇ ಸಂದರ್ಭ ಕಾಲೇಜಿನ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ವಿವಿಧ ತಳಿಯ 150 ಗಿಡಗಳನ್ನು ನೆಡಲಾಯಿತು. ಕಾಲೇಜಿನ ಪಾಚಾರ್ಯ ಮಂದಣ್ಣ, ಬಳಗದ ಡೆನ್ನಿಸ್ ಡಿಸೋಜಾ, ಕೆ.ಎಸ್. ಅನಿಲ್‍ಕುಮಾರ್, ಕಸಾಪದ ಮೊಯಿದ್ದೀನ್, ಕಾಲೇಜಿನ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಇದ್ದರು.ಮೂರ್ನಾಡು: ಇಲ್ಲಿನ ಪದವಿ ಕಾಲೇಜಿನಲ್ಲಿ ಎನ್‍ಎಸ್‍ಎಸ್ ವತಿಯಿಂದ ಸೀಡ್ ಬಾಲ್ ತಯಾರಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಮರ್ಥ ಭಾರತ್ ಎಂಬ ಸರ್ಕಾರೇತರ ಸಂಸ್ಥೆಯ ಸಹಯೋಗ ದೊಂದಿಗೆ ವಿವಿಧ ರೀತಿಯ ಮರದ ಸುಮಾರು 5000 ಬೀಜದ ಉಂಡೆಗಳನ್ನು ತಯಾರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರು ಇದ್ದರು.ಸುಂಟಿಕೊಪ್ಪ: ಮಾದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆಯಿಂದ ವಿತರಿಸಲಾದ ವಿವಿಧ ಜಾತಿಯ 200 ಗಿಡಗಳನ್ನು ಶಾಲಾ ಆವರಣದ ಸುತ್ತ ನೆಡಲಾಯಿತು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಬಿ.ಕೆ. ಬಾಲಕೃಷ್ಣ ಗಿಡ ನೆÀಡುವದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕರು ಎಸ್‍ಡಿಎಂಸಿ ಸದಸ್ಯರು ವಿದ್ಯಾರ್ಥಿಗಳು ಹಾಜರಿದ್ದರು.