ಮಡಿಕೇರಿ, ಜು. 31: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಪೆರಾತ ಫ್ರೆಂಡ್ಸ್ ಯುವಕ ಸಂಘ ಅರ್ವತ್ತೊಕ್ಲು, ಬಿಳಿಗೇರಿ ಹಾಗೂ ಕಗ್ಗೋಡ್ಲು ಕಾವೇರಿ ಯುವಕ ಸಂಘದ ಸಹಯೋಗದಲ್ಲಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಅರ್ವತ್ತೊಕ್ಲುವಿನ ಪೆರಾತ ಫ್ರೆಂಡ್ಸ್ ಯುವಕ ಸಂಘದ ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ಮಡಿಕೇರಿ ತಾ.ಪಂ. ಸದಸ್ಯೆ ಕುಮುದಾ ರಶ್ಮಿ ಉದ್ಘಾಟಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯP್ಷÀ ಪಿ.ಪಿ. ಸುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸ ಲಾಗಿದೆ. ತಾಲೂಕು ಯುವ ಒಕ್ಕೂಟದ ಮೂಲಕ ಜಿಲ್ಲೆಯ ವಿವಿಧೆಡೆ ಯುವಕ ಸಂಘ, ಯುವತಿ ಮಂಡಳಿ ಆಶ್ರಯದಲ್ಲಿ ಕ್ರೀಡಾ ಕೂಟಗಳು ನಡೆಯಲಿದೆ ಎಂದರು. ಗ್ರಾಮೀಣ ಪ್ರತಿಭೆಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪೆರಾತ ಯುವಕ ಸಂಘದ ಸ್ಥಾಪಕ ಅಧ್ಯಕ್ಷÀ ಬಾಳಾಡಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕೆ.ಎಂ. ಮೋಹನ್, ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷÀ ನವೀನ್ ದೇರಳ ಹಾಜರಿದ್ದರು. ಕಾರ್ಯಕ್ರಮವನ್ನು ಪೇರಾತ ಯುವಕ ಸಂಘದ ಬಾಳಾಡಿ ದಿಲೀಪ್ ಸ್ವಾಗತಿಸಿದರು, ರವಿ ನಿರೂಪಿಸಿ, ವಂದಿಸಿದರು.
ಸ್ಪರ್ಧೆಗಳ ವಿಜೇತರು: ಕ್ರೀಡಾಕೂಟದಲ್ಲಿ ನಿಂಬೆ ಹಣ್ಣಿನ ಚಮಚ ಸ್ಪರ್ಧೆಯಲ್ಲಿ ದೃತಿ ದೇವಜನ ಪ್ರಥಮ, ಸುಮಿ ದೇವಜನ ದ್ವಿತೀಯ, ದಮಯಂತಿ ಕಡ್ಯದ ತೃತೀಯ, ಗೋಣಿಚೀಲದ ಓಟದಲ್ಲಿ ಲೇಖಾ ಪ್ರಥಮ, ಅನನ್ಯ ದ್ವಿತೀಯ, ದೃತಿ ದೇವಜನ ತೃತೀಯ, ಪುರುಷರ ವಿಭಾಗದಲ್ಲಿ ಸುದೀಪ್ ಪ್ರಥಮ, ರವಿ ಕಗ್ಗೋಡ್ಲು ದ್ವಿತೀಯ, ಕಿಶೋರ್ ರೈ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರೀತಿ ಕಡ್ಯದ ಪ್ರಥಮ, ಅಂಜು ದ್ವಿತೀಯ, ಪದ್ಮ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪಾಸಿಂಗ್ ಬಾಲ್ ಮಹಿಳೆಯರ ವಿಭಾಗದಲ್ಲಿ ರಶ್ಮಿ ತುಂತಜೆ ಪ್ರಥಮ, ದಮಯಂತಿ ಕಡ್ಯದ ದ್ವಿತೀಯ, ಮೈನಾ ಕಡ್ಯದ ತೃತೀಯ, ಪುರುಷರ ವಿಭಾಗದಲ್ಲಿ ಲೋಕೇಶ್ ಮಡಿಕೇರಿ ಪ್ರಥಮ, ಲವಿ ಲೋಕೇಶ್ ದ್ವಿತೀಯ, ಮಧು ಕುಂಜಿಲನ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸೂಜಿಗೆ ನೂಲಿನ ಓಟದ ಸ್ಪರ್ಧೆಯಲ್ಲಿ ಪ್ರೀತಿ ಮತ್ತು ತಂಡ ಪ್ರಥಮ, ಲೇಖಾ ಮತ್ತು ತಂಡ ದ್ವಿತೀಯ, ವರ್ಷಾ ಮತ್ತು ತಂಡ ತೃತೀಯ ಸ್ಥಾನ, ತೆಂಗಿನಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯಲ್ಲಿ ವೆಂಕಟೇಶ್ ತುಂಮ್ತಜೆ ಪ್ರಥಮ, ಮನೋಜ್ ಮದೆನಾಡು ದ್ವಿತೀಯ ಸ್ಥಾನ.
50 ಮೀಟರ್ ಓಟ ಬಾಲಕಿಯರ ವಿಭಾಗದಲ್ಲಿ ಪ್ರಾರ್ಥನ ಪ್ರಥಮ, ಕುಷಿ ದ್ವಿತೀಯ, ಶಿಲ್ಪ ತೃತೀಯ. ಪುರುಷರ ವಿಭಾಗದಲ್ಲಿ ಭವಿತ್ ಪ್ರಥಮ, ಹಿತೇಸ್ ದ್ವಿತೀಯ ರಾಹುಲ್ ಹಾಗೂ ಭುವನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಭಾರದ ಗುಂಡು ಎಸೆಯುವ ಸ್ಪರ್ಧೆಯಲ್ಲಿ ಜಯ ಕಡ್ಯದ ಪ್ರಥಮ, ವಿನು ದ್ವಿತೀಯ ಚೇತನ್ ತೃತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ರಶ್ಮಿ ತುಂತಜ್ಜೀರ ಪ್ರಥಮ, ರಾಣಿ ಮಾಚಯ್ಯ ದಂಬೆಕೋಡಿ ದ್ವಿತೀಯ, ಪದ್ಮ ತೃತೀಯ ಸ್ಥಾನ ಪಡೆದುಕೊಂಡರು.