ಶನಿವಾರಸಂತೆ, ಜು. 31: ಸಮೀಪದ ನಿಲುವಾಗಿಲು-ಬೆಸೂರು ಅವಳಿ ಗ್ರಾಮಗಳ ಶ್ರೀ ಕ್ಷೇತ್ರ ಬಾಲತ್ರಿಪುರ ಸುಂದರಿ ದೇವಾಲಯದಲ್ಲಿ ತಾ. 2 ರಂದು ಅಮ್ಮನವರಿಗೆ ಶ್ರಾವಣ ಮಾಸದ ಪ್ರಥಮ ಶುಕ್ರವಾರ ವಿಶೇಷ ಪೂಜಾ ಕಾರ್ಯವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೂಜಾ ಕೈಂಕರ್ಯ ನಡೆಯಲಿದೆ. ಅಮ್ಮನವರಿಗೆ ಅಭಿಷೇಕ, ಹೂ-ಆಭರಣಗಳ ಅಲಂಕಾರ, ಪೂಜೆ, ಮಹಾ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗವಿದೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ನಿವೃತ್ತ ಯೋಧ ಸಿ.ಬಿ. ಪ್ರಸನ್ನ ತಿಳಿಸಿದ್ದಾರೆ.