ಮಡಿಕೇರಿ: ಮೂವತ್ತೈದು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಅವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ವೇದಿಕೆಯಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಗತ್ ತಿಮ್ಮಯ್ಯ, ಸೂಕ್ಷ್ಮಾಣುಜೀವ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕಿ ಸೌಮ್ಯ ಉಪಸ್ಥಿತರಿದ್ದರು.

ಪ್ರಾದ್ಯಾಪಕರಾದ ಡಾ. ಜಗತ್ ತಿಮ್ಮಯ್ಯ, ಆಂಗ್ಲ ವಿಭಾಗದ ಮುಖ್ಯಸ್ಥರಾದ ಪೂಣಚ್ಚ, ಸೂಕ್ಷ್ಮಾಣು ವಿಭಾಗದ ಸೌಮ್ಯ, ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ. ರಾಘವ್ ಬಿ., ರಾಜ್ಯಶಾಸ್ತ್ರ ವಿಭಾಗದ ಡಾ. ಶಹಬರ್ ಪಾಷ, ವಾಣಿಜ್ಯ ವಿಭಾಗದ ಜಗದೀಶ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಡಾ. ತಿಪ್ಪೇಸ್ವಾಮಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್, ಕನ್ನಡ ಪ್ರಾದ್ಯಾಪಕ ಡಾ. ಕರುಣಾಕರ, ಸಮಾಜಶಾಸ್ತ್ರ ಉಪನ್ಯಾಸಕ ರಂಗಪ್ಪ ಹಾಗೂ ಪ್ರದೀಪ್ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವೀರಾಜಪೇಟೆ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಶ್ರದ್ಧೆ, ಪ್ರಾಮಾಣಿಕತೆ, ದೇಶಭಕ್ತಿ ಮತ್ತು ಶ್ರಮ ಪಡುವ ಮನೋಭಾವವನ್ನು ಹೊಂದಿರಬೇಕೆಂದು ಪ್ರೊ. ಐ.ಕೆ. ಬಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಪದವಿ ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಗೋಣಿಕೊಪ್ಪಲು ಹಾಗೂ ವೀರಾಜಪೇಟೆ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೊಜನಾ ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ವಹಿಸಿಕೊಂಡು ಮಾತನಾಡಿದರು. ರಾಷ್ಟ್ರೀಯ ಸೇವಾ ಯೊಜನಾ ಘಟಕದ ಅಧಿಕಾರಿಗಳಾದ ಹೆಚ್.ವಿ. ನಾಗರಾಜ್ ಮತ್ತು ಸಿ.ಪಿ. ನಿರ್ಮಿತ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಂ.ಎಂ. ದೇಚಮ್ಮ ಉಪಸ್ಥಿತರಿದ್ದರು. ಗೋಣಿಕೊಪ್ಪ ವರದಿ: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆ ಅಕ್ಷರ ದಾಸೋಹ ಬಳಕೆಗೆ ಹಳೇ ವಿದ್ಯಾರ್ಥಿಗಳು ಕುಕ್ಕರ್ ಕೊಡುಗೆ ನೀಡಿದರು. ವಿದ್ಯಾರ್ಥಿಗಾಳದ ಮಜೀದ್, ನೌಶದ್, ರಹೀಂ, ಅನೀಶ್, ಶಕೀರ್, ರಾಗಿಣಿ, ಸತ್ಯ ಉಪಸ್ಥಿತರಿದ್ದರು.ಸುಂಟಿಕೊಪ್ಪ: ಗದ್ದೆಹಳ್ಳದಲ್ಲಿರುವ ಶ್ರೀ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಉಚಿತ ನೋಟು ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಹಾಗೂ ತಾ.ಪಂ. ಸದಸ್ಯೆ ವಿಮಲಾವತಿ ವಿತರಿಸಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯೆ ನಾಗರತ್ನ ಸುರೇಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಗೋಪಾಲ್, ಸಹಾಯಕಿ ವಸಂತಿ ಹಾಗೂ ನಿಲಯದ ಬಾಲಕರು ಉಪಸ್ಥಿತರಿದ್ದರು.ಗೋಣಿಕೊಪ್ಪ: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಸಿಬಿಎಸ್‍ಇ ಶಾಲೆಯಲ್ಲಿ ಮಳೆಗಾಲದ ವಿಶೇಷತೆಯನ್ನು ಸಾರುವ ಕುರಿತಾಗಿ ಪುಟಾಣಿ ಮಕ್ಕಳಿಂದ ಮಾನ್ಸೂನ್ ಡೇ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮಕ್ಕೆ ಪುಟಾಣಿ ಮಕ್ಕಳು ನಾಡಿಗೆ ಸುಭಿಕ್ಷೆಯ ಉತ್ತಮ ಮಳೆ ಬೀಳಲೆಂದು ಪ್ರಾರ್ಥಿಸುತ್ತಾ ಮಳೆ ಗೀತೆಯೊಂದನ್ನು ಹಾಡುವ ಮೂಲಕ ಚಾಲನೆ ನೀಡಿದರು. ಮಳೆಗಾಲದ ವಿಶೇಷತೆ-ಮಹತ್ವ, ಜಾಗರೂಕತೆ ಕ್ರಮಗಳು, ಮಳೆಗಾಲದ ಉಡುಪುಗಳು, ತಿನಿಸುಗಳ ಕುರಿತಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆಯೊಂದಿಗೆ ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಷ್ಟರಮಟ್ಟಿಗೆ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ತಿಳಿಸಲಾಯಿತು. ವಿದ್ಯಾರ್ಥಿಗಳಿಗೆ ಶಿಕ್ಷಕರು ಸ್ಯಾಂಡ್‍ವಿಚ್ ತಯಾರಿಸುವದನ್ನು ತಿಳಿಸಿಕೊಟ್ಟು ಅದನ್ನು ತಿನ್ನುತ್ತಾ ಮಳೆಗಾಲದ ವಿಶೇಷ ದಿನದ ಸಂಭ್ರಮವನ್ನು ಕಳೆದರು.